ಸಿದ್ದಾಪುರ, ಫೆ. 24: ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬರಿಗೆ ಸರ್ಕಾರದಿಂದ ಮಂಜೂರಾದ ಪಿಂಚಣಿಯ ಆದೇಶ ಪತ್ರವನ್ನು ಕಂದಾಯ ಅಧಿಕಾರಿಗಳು ಫಲಾನುಭವಿಯ ನಿವಾಸಕ್ಕೆ ತೆರಳಿ ಆದೇಶ ಪತ್ರವನ್ನು ನೀಡಿ ಮಾನವೀಯತೆ ಮೆರೆದರು.

ಅಮ್ಮತ್ತಿ ಹೋಬಳಿಯ ಪುಲಿಯೇರಿ ಗ್ರಾಮದ ನಿವಾಸಿ ಪರಶುರಾಮ ಎಂಬವರು ಅನಾರೋಗ್ಯದಿಂದ ಬಳಲುತ್ತಿದ್ದು, ಇವರಿಗೆ ನಡೆದಾಡಲು ಸಾಧ್ಯವಿಲ್ಲದ ಹಿನ್ನೆಲೆ ಸರ್ಕಾರದಿಂದ ಅವರಿಗೆ ಮಂಜೂರಾದ ಪಿಂಚಣಿಯ ಆದೇಶ ಪತ್ರವನ್ನು ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಹಾಗೂ ಗ್ರಾಮ ಲೆಕ್ಕಿಗ ಅನೀಶ್ ಅವರು ಪರಮೇಶ್ ಮನೆಗೆ ತೆರಳಿ ಪತ್ರವನ್ನು ನೀಡಿದರು. ಈ ಸಂದರ್ಭ ತಾ.ಪಂ. ಮಾಜಿ ಸದಸ್ಯ ಜಾನ್ಸ್‍ನ್ ಹಾಜರಿದ್ದರು.