ನಾಪೆÉÇೀಕ್ಲು, ಫೆ. 24: ಕೊಡಗು ಜಿಲ್ಲೆಯು ಕ್ರೀಡೆಯ ತವರೂರು ಆಗಿದ್ದು, ಜಿಲ್ಲೆಗೆ ಕರ್ನಾಟಕ ಒಲಂಪಿಕ್ಸ್ ಅಸೋಸಿಯೇಷನ್ ಮಾನ್ಯತೆ ನೀಡಿ ಕ್ರೀಡೆಗೆ ಹೆಚ್ಚಿನ ಅವಕಾಶವನ್ನು ಕಲ್ಪಿಸುವಂತಾಗ ಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ಚೆಪ್ಪುಡೀರ ಅರುಣ್ ಮಾಚಯ್ಯ ಹೇಳಿದರು. ನಾಪೆÉÇೀಕ್ಲು ಡೆಕ್ಕನ್ ಯೂತ್ ಕ್ಲಬ್ ಆಯೋಜಿಸಿದ್ದ ಹೊನಲು ಬೆಳಕಿನ ಮುಕ್ತ ವಾಲಿಬಾಲ್ ಪಂದ್ಯಾಟದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.

ದೇಶದಲ್ಲಿ ಸುಮಾರು 640 ಜಿಲ್ಲೆಗಳಲ್ಲಿ 10 ಜಿಲ್ಲೆಗಳನ್ನು ಮಾತ್ರ ಕ್ರೀಡಾ ಜಿಲ್ಲೆ ಎಂದು ಪರಿಗಣಿಸಲಾಗಿದ್ದು, ಅದರಲ್ಲಿ ಕೊಡಗು ಜಿಲ್ಲೆಯು ಒಂದಾಗಿರುವದು ಸಂತೋಷದ ವಿಷಯ.

ನಮ್ಮ ಜಿಲ್ಲೆಯಲ್ಲಿ ಗ್ರಾಮೀಣ ಕ್ರೀಡೆಗೆ ಹೆಚ್ಚು ಒತ್ತು ನೀಡುವ ಸಂಘ, ಸಂಸ್ಥೆ, ಕ್ಲಬ್‍ಗಳಿದ್ದು ಇವರಿಗೆ ಸರಕಾರದ ಪ್ರೋತ್ಸಾಹ ಮುಖ್ಯ. ಜಿಲ್ಲೆಯ ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದಲ್ಲಿ ಅವರು ರಾಷ್ಟ್ರೀಯ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚುವದರಲ್ಲಿ ಸಂಶಯ ಇಲ್ಲ ಎಂದು ಹೇಳಿದರು.

ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರುಳೀಧರ್ ಕರುಂಬಮ್ಮಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇಂತಹ ಕ್ರೀಡೆಯನ್ನು ಆಯೋಜಿಸಿರುವದರಿಂದ ಯುವ ಪೀಳಿಗೆ ಕ್ರೀಡೆಯಲ್ಲಿ ಮುಂದೆ ಬರಲು ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಮತ್ತು ರಾಜ್ಯ ಜೆಡಿಎಸ್ ಸಂಘಟನಾ ಕಾರ್ಯದರ್ಶಿ ಎಂ.ಎ. ಮನ್ಸೂರ್ ಅಲಿ ವಹಿಸಿದ್ದರು ವೇದಿಕೆಯಲ್ಲಿ ವಕ್ಪ್ ಬೋರ್ಡ್ ಅಧ್ಯಕ್ಷ ಎಂ. ಹೆಚ್. ಅಬ್ದುಲ್ ರಹೀಮಾನ್, ಕಾಂಗ್ರೆಸ್ ವಕ್ತಾರ ಟಾಟೂ ಮೊಣ್ಣಪ್ಪ, ನಾಪೆÉÇೀಕ್ಲು ಗ್ರಾ.ಪಂ. ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ಹೊದ್ದೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಹೆಚ್.ಎ. ಹಂಸ, ಗ್ರಾ.ಪಂ. ಸದಸ್ಯರಾದ ಮಹಮ್ಮದ್ ಖುರೇಶಿ, ರಷೀದ್, ರಷೀದ್ ಬೇಂಗೂರ್, ಮೊಯಿದು ಕೊಟ್ಟಮುಡಿ, ಮುತ್ತಾಲಿಕ್, ಸುರಾನ್, ನೌಫಲ್, ನಾಸೀಪ್ ಮತ್ತಿತರರು ಇದ್ದರು. ಉಸ್ಮಾನ್ ಚೆರಿಯಪರಂಬು ಸ್ವಾಗತಿಸಿ, ನಿರೂಪಿಸಿ ವಂದಿಸಿದರು.

- ದುಗ್ಗಳ