ಕುಶಾಲನಗರ, ಫೆ. 16: ಕೊಡಗು ಜಿಲ್ಲೆಯ ಮೂಲಕ ಹಾದುಹೋಗುವ ರೈಲ್ವೇ ಮಾರ್ಗವನ್ನು ವಿರೋಧಿಸಿ ಫೆ.18 ರಂದು ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೆ ಕುಶಾಲನಗರ ಕೊಡವ ಸಮಾಜ ಬೆಂಬಲ ವ್ಯಕ್ತಪಡಿಸಿದೆ.ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಅಧ್ಯಕ್ಷ ಮಂಡೇಪಂಡ ಬೋಸ್ ಮೊಣ್ಣಪ್ಪ ಪ್ರತಿಭಟನೆಯಲ್ಲಿ ಕೊಡವ ಸಮಾಜದ ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಮೈಸೂರಿನಲ್ಲಿ ಹಮ್ಮಿಕೊಂಡಿ ರುವ ರ್ಯಾಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯಿಂದ ಜನರು ಪಾಲ್ಗೊಳ್ಳುತ್ತಿದ್ದು ಜಿಲ್ಲೆಯ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಹೋರಾಟಕ್ಕೆ ಕೈಜೋಡಿಸುವಂತೆ ಸಮಾಜದ ಗೌರವ ಕಾರ್ಯದರ್ಶಿ ಪುಲಿಯಂಡ ಚಂಗಪ್ಪ ಕರೆ ನೀಡಿದರು.

ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷ ಐಲಪಂಡ ಮಂದಣ್ಣ, , ಖಜಾಂಚಿ ಗೌಡಂಡ ದೇವಯ್ಯ, ಜಂಟಿ ಕಾರ್ಯದರ್ಶಿ ಮೇವಡ ಮಧು ಮಾದಯ್ಯ, ನಿರ್ದೇಶಕರುಗ ಳಾದ ಪಳಂಗೇಟಿರ ಟಿಟ್ಟಿ, ದಿಲೀಪ್, ಚೌರೀರ ತಿಮ್ಮಯ್ಯ ಇದ್ದರು.

*ಇಂದು ಹುದಿಕೇರಿ ಕೊಡವ ಸಮಾಜದ ಅಧ್ಯಕ್ಷ ಕೋದಂಡ ಸಿ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಕೊಡಗಿನಲ್ಲಿ ಜಾರಿಗೊಳ್ಳಲಿರುವ ರೈಲ್ವೆ ಯೋಜನೆಯನ್ನು ಖಂಡಿಸಿ ತಾ. 18 ರಂದು ಮೈಸೂರಿನಲ್ಲಿ ಹಮ್ಮಿಕೊಂಡಿ ರುವ ಪ್ರತಿಭಟನೆಗೆ ಹುದಿಕೇರಿ ಕೊಡವ ಸಮಾಜವು ತನ್ನ ಸಂಪೂರ್ಣ ಬೆಂಬಲ ನೀಡುವ ನಿರ್ಣಯ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಮಾಜದ ಉಪಾಧ್ಯಕ್ಷೆ ತೀತಿರ ಊರ್ಮಿಳಾ ಸೋಮಯ್ಯ, ಕಾರ್ಯದರ್ಶಿ ಮಂಡಂಗಡ ಎಂ. ಅಶೋಕ್, ಖಜಾಂಚಿ ಅಳಮೇಂಗಡ ಡಬ್ಲ್ಯೂ ಮುದ್ದಪ್ಪ, ನಿರ್ದೇಶಕರು ಗಳಾದ ಎಂ.ಎಂ. ನವೀನ್, ಬಯವಂಡ ಪಿ. ಲಕ್ಷ್ಮಣ, ಚೆಕ್ಕೇರ ಎಸ್. ಅರುಣ್, ಕಿರುಂದಂಡ ಜಿ. ಪ್ರವೀಣ್, ಅಜ್ಜಿಕುಟ್ಟೀರ ಮುತ್ತಪ್ಪ, ಐಪುಮಾಡ ಎಂ. ರೋನಿ, ಬಯವಂಡ ಮಹಾಬಲ, ಚೆಕ್ಕೇರ ಹರೀಶ್ ನಂಜಪ್ಪ, ಚೆಕ್ಕೇರ ಎ. ರಂಜಿತ್, ಬೊಳ್ಳಜ್ಜೀರ ರಾಧ ಕರುಂಬಯ್ಯ, ಮಂಡಂಗಡ ಎಂ. ಕಾವೇರಿಯಮ್ಮ, ನೂರೇರ ಎಂ. ಬನ್ಸಿ ಹಾಜರಿದ್ದರು.