ಮಡಿಕೇರಿ, ಫೆ. 14: ಕೊಡಗು ಜಿಲ್ಲೆಯಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಆದ್ಯತೆಯೊಂದಿಗೆ ಹಿಂದುಳಿದ ಮತ್ತು ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳಿಗೆ ವಿಶೇಷ ಸವಲತ್ತು ಕಲ್ಪಿಸಿದೆ. ಈ ಸಂಬಂಧ ಜಿಲ್ಲೆಯ 44,381 ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕಾಗಿ ಸರಕಾರ ರೂ. 4,42,555 ಸಾವಿರ ಅನುದಾನ ಕಲ್ಪಿಸಿದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಕೊಡಗಿನ 39,388 ಮಕ್ಕಳಿಗೆ ರೂ. 9,98,63 ಸಾವಿರ ಅನುದಾನದೊಂದಿಗೆ, ಪರಿಶಿಷ್ಟ ವರ್ಗದ 15,312 ವಿದ್ಯಾರ್ಥಿಗಳಿಗೆ ರೂ. 2,75,13,000 ನೆರವು ಕಲ್ಪಿಸಿದೆ. ಅಲ್ಪಸಂಖ್ಯಾತ ವರ್ಗದ 29,653 ವಿದ್ಯಾರ್ಥಿಗಳಿಗೆ ರೂ. 3,64,68.000 ವೆಚ್ಚದ ಅನುದಾನ ಒದಗಿಸಲಾಗಿದೆ. ಅಲ್ಲದೆ ವಿದ್ಯಾಸಿರಿ ಯೋಜನೆಯಡಿ ಇತರ ವಿದ್ಯಾರ್ಥಿಗಳಿಗೆ ರೂ. 1,15,88,000 ವೆಚ್ಚವನ್ನು 1704 ಮಕ್ಕಳಿಗೆ ಕಲ್ಪಿಸಲಾಗಿದೆ. ಈ ಸಲುವಾಗಿ ನಾಲ್ಕೂವರೆ ವರ್ಷದಲ್ಲಿ ಅಂದಾಜು ರೂ. 22,06,87,000 ಮೊತ್ತದ ಒಟ್ಟು 1,30,438 ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ.

ಅಲ್ಲದೆ ಕ್ಷೀರ ಭಾಗ್ಯಕ್ಕಾಗಿ ರೂ. 1,42,30,000 ಕಲ್ಪಿಸಲಾಗಿದೆ. ಒಟ್ಟಿನಲ್ಲಿ ಜಿಲ್ಲೆಯಲ್ಲಿ ಶೈಕ್ಷಣಿಕ ಅಭಿವೃದ್ಧಿಗಾಗಿ ರಾಜ್ಯ ಸರಕಾರ ವಿಶೇಷ ಕಾಳಜಿಯೊಂದಿಗೆ ಅನುದಾನ ನೀಡಿದೆ ಎಂದು ರಾಜೀವ್‍ಗಾಂಧಿ ಪಂಚಾಯತ್ ರಾಜ್ ಸಂಘಟನೆ ಸಂಯೋಜಕ ತೆನ್ನಿರ ಮೈನಾ ಅಭಿಪ್ರಾಯಪಟ್ಟಿದ್ದಾರೆ.