ವೀರಾಜಪೇಟೆ, ಫೆ. 14: ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿಯೇ ಎಲ್ಲ ರೀತಿಯ ಚಟುವಟಕೆಯನ್ನೊಳಗೊಂಡ ಶಿಕ್ಷಣ ನೀಡಿದರೆ ಮಕ್ಕಳು ಮುಂದೆ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ ಎಂದು ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯ ನಿವೃತ್ತ ಪ್ರಾಂಶುಪಾಲ ಪ್ರೊ. ಎಂ.ಡಿ. ನಂಜುಂಡ ಹೇಳಿದರು.

ವೀರಾಜಪೇಟೆಯ ಯೂರೋ ಕಿಡ್ಸ್ ಶಾಲೆಯ ಎರಡನೇ ವಾರ್ಷಿಕೋತ್ಸವವನ್ನು ಉದ್ಘಾಟಿಸಿದ ಅವರು, ಮಕ್ಕಳಿಗೆ ಎಲ್ಲ ರೀತಿಯ ಹಬ್ಬ-ಹರಿದಿನಗಳನ್ನು ಶಾಲೆಗಳಲ್ಲಿ ಆಚರಿಸುವ ಮೂಲಕ ಶಿಕ್ಷಣ ನೀಡಬೇಕು. ಮಕ್ಕಳು ಶಾಲೆಯ ಎಲ್ಲ ರೀತಿಯ ಚಟುವಟಿಕೆಗಳಲ್ಲಿ ಖುದ್ದು ಭಾಗವಹಿಸುವಂತೆ ಮಾರ್ಗದರ್ಶನ ನೀಡಬೇಕು.

ಶಾಲಾ ಸಮಿತಿ ಅಧ್ಯಕ್ಷ ಕಲಿಯಂಡ ಪ್ರದೀಪ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಚೋಂದಮ್ಮ ಪ್ರದೀಪ್, ಕಲಿಯಂಡ ಅಯ್ಯಪ್ಪ, ಪ್ರಾಂಶುಪಾಲ ಬೊಟ್ಟೋಳಂಡ ಪ್ರತಿಮ ರಂಜನ್ ಉಪಸ್ಥಿತರಿದ್ದರು. ಈ ಸಂದರ್ಭ ಯೂರೋ ಕಿಡ್ಸ್ ಶಾಲೆಯಲ್ಲಿ ಎರಡು ವರ್ಷ ಶಿಕ್ಷಣ ಪೊರೈಸಿದ ಮಕ್ಕಳಿಗೆ ಪದವಿ ಪ್ರದಾನ ಮಾಡಿ ಬೀಳ್ಕೊಡಲಾಯಿತು. ಶಿಕ್ಷಕಿ ನೇಹ ಮನ್ನನ್ ಸ್ವಾಗತಿಸಿದರೆ, ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು ಶುಭ ವಂದಿಸಿದರು.