ಮಡಿಕೇರಿ, ಫೆ. 14: ಗಾಳಿಬೀಡು ಗ್ರಾಮ ಪಂಚಾಯಿತಿಯ ವಿವಿಧ ವಾರ್ಡ್ಗಳ ಸಭೆಯು ತಾ. 15ರಂದು (ಇಂದು) ಬೆಳಿಗ್ಗೆ 11 ಗಂಟೆಗೆ ಪಂಚಾಯಿತಿ ಸಭಾಂಗಣದಲ್ಲಿ ನಡೆಯಲಿದೆ. ಅಂದು 3 ಗಂಟೆಗೆ ಕಡಮಕಲ್ ಅಂಗನವಾಡಿಯಲ್ಲಿ ಜರುಗಲಿದೆ. ತಾ. 16ರಂದು 2ನೇ ಮೊಣ್ಣಂಗೇರಿ ಶಾಲೆಯಲ್ಲಿ 10.30ಕ್ಕೆ ನಡೆಯಲಿದೆ. ತಾ. 17ರಂದು ಕಾಲೂರು ಶಾಲೆಯಲ್ಲಿ ಬೆಳಿಗ್ಗೆ 11 ಗಂಟೆಗೆ ಹಾಗೂ ತಾ. 19ರಂದು ಮುಟ್ಲು ಅಂಗನವಾಡಿಯಲ್ಲಿ ಬೆಳಿಗ್ಗೆ 11 ಗಂಟೆಗೆ ಮತ್ತು 12.30ಕ್ಕೆ ಹಮ್ಮಿಯಾಲ ಅಂಗನವಾಡಿಯಲ್ಲಿ ಸಭೆ ಜರುಗಲಿದೆ. ಆಯಾ ವಾರ್ಡ್ ಸದಸ್ಯರು ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಪಂಚಾಯಿತಿ ಅಧಿಕಾರಿಗಳು ಇತರ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ.