ಸುಂಟಿಕೊಪ್ಪ, ಫೆ. 11: ಸಿಟಿ ಯುನೈಟೆಡ್ ಫುಟ್ಬಾಲ್ ಸಂಸ್ಥೆ ಮತ್ತೆ ಪುನಶ್ಚೇತನಗೊಂಡು ಅಸ್ತಿತ್ವಕ್ಕೆ ಬಂದಿರುವದು ಆರೋಗ್ಯಕರ ಬೆಳವಣಿಗೆ ಎಂದು ಹಾಸನ ಗ್ರಾಹಕರ ವೇದಿಕೆ ಅಧ್ಯಕ್ಷ ಎ. ಲೋಕೇಶ್ ಕುಮಾರ್ ಹೇಳಿದರು.
ಸಿಟಿ ಯುನೈಟೆಡ್ ಕ್ಲಬ್‍ಗೆ ಮರುಚಾಲನೆ ಸಮಾರಂಭವನ್ನು ಶಾಷ್ಮರ್ ಶಟಲ್ ಬ್ಯಾಂಡ್ಮಿಂಟನ್ ಒಳ ಕ್ರಿಂಡಾಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಮ್ಮ ಸುಂಟಿಕೊಪ್ಪದ ಅಡ್ಮಿನ್ ಜಾಹೀದ್ ಮಾತನಾಡಿ, ಎಲ್ಲಾ ನ್ಯೂನತೆಗಳನ್ನು ಬದಿಗೊತ್ತಿ ಸಿಟಿ ಯುನೈಟೆಡ್ ತಂಡ ಮತ್ತೆ ಶಿಸ್ತುಬದ್ಧ ತಂಡವಾಗಿ ತಲೆಎತ್ತಲಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಉದ್ಯಮಿ ಆರ್. ಶಾಂತರಾಮ್ ಕಾಮತ್ ಸಂಘದ ಕ್ರೀಡಾಪಟುಗಳ ಕ್ರೀಡಾ ಉಡುಪು ಬಿಡುಗಡೆ ಗೊಳಿಸಿದರು. ವೇದಿಕೆಯಲ್ಲಿ ಸಿಟಿ ಯುನೈಟೆಡ್ ತಂಡದ ಕಾಫಿ ಉದ್ಯಮಿ ಪಿ.ಸಿ. ಮೋಹನ್ ಮತ್ತೊಂದು ಉಡುಪ್ಪನ್ನು ಅನಾವರಣಗೊಳಿಸಿದರು.
ವೇದಿಕೆಯಲ್ಲಿ ಪಂಚಾಯಿತಿ ಸದಸ್ಯರಾದ ಎ. ಶ್ರೀಧರ್ ಕುಮಾರ್, ಲೆಕ್ಕಪರಿಶೋಧಕ ಪಿ.ಡಬ್ಬ್ಯು. ಫ್ರಾನ್ಸಿಸ್, ಸಿಟಿ ಯುನೈಟೆಡ್ ಅಧ್ಯಕ್ಷ ಸುರೇಶ್ ಚಂದು, ಉಪಾಧ್ಯಕ್ಷ ಹರೀಶ್ ಉಪಸ್ಥಿತರಿದ್ದರು.
ಸಿಟಿ ಯುನೈಟೆಡ್ ತಂಡದ ಸತೀಶ್ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.