ನಾಪೆÇೀಕ್ಲು, ಫೆ. 12: ಎಡಪಾಲ ಗ್ರಾಮದ ಮಹಮ್ಮದ್ ರಫೀಕ್ ಎಂಬವರಿಗೆ ಅದೇ ಗ್ರಾಮದ ಹನೀಫ್ ಎಂಬವರು ಗುಂಡು ಹಾರಿಸಿ ಹತ್ಯೆಗೈಯಲು ವಿಫಲ ಯತ್ನ ನಡೆಸಿರುವ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಎಡಪಾಲ ಗ್ರಾಮದ ಮಹಮ್ಮದ್ ರಫೀಕ್ ಕೆ.ಯು ಈ ಬಗ್ಗೆ ನಾಪೆÇೀಕ್ಲು ಪೆÇಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನಾನು ಹೊಸ ಮನೆಯನ್ನು ಕಟ್ಟುತ್ತಿದ್ದು, ಅದಕ್ಕಾಗಿ ಜೀಪಿನಲ್ಲಿ ಕಲ್ಲು ಸಾಗಿಸುತ್ತಿರುವ ಸಂದರ್ಭ ನನ್ನನ್ನು ತಡೆದ ಹನೀಫ್ ವಿನಃ ಕಾರಣ ಆಕ್ಷೇಪಿಸಿ, (ಕೆ.ಎ. 12-ಎಂ.ಎ 1573) ನೋಂದಾಣಿ ಸಂಖ್ಯೆಯ ಓಮಿನಿ ವ್ಯಾನ್ ಒಳಗಿಂದ ನನ್ನ ಕಡೆ ಗುಂಡು ಹಾರಿಸಿದ್ದು, ನಾನು ಮತ್ತು ನನ್ನ ತಂದೆ ಹುಸೈನಾರ್ ಪ್ರಾಣಾಪಾಯದಿಂದ ತಪ್ಪಿಸಿಕೊಂಡಿರುವದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ನಾಪೆÇೀಕ್ಲು ಪೆÇಲೀಸ್ ಠಾಣಾಧಿಕಾರಿ ನಂಜುಂಡ ಸ್ವಾಮಿ ಆರೋಪಿ ಹನೀಫ್‍ನನ್ನು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.