ಮಡಿಕೇರಿ, ಫೆ. 12: ಸಿದ್ದಾಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಚ್ಚಾಟ್ ಎಂಬಲ್ಲಿನ ನಿವಾಸಿ ಎಂ. ಪೂವಣ್ಣ ಎಂಬವರ ತೋಟದಲ್ಲಿ ಕಾಳು ಮೆಣಸು ಕುಯ್ಯುತ್ತದ್ದ ವೇಳೆ ಕಾರ್ಮಿಕನೊಬ್ಬ ವಿದ್ಯುತ್ ಸ್ಪರ್ಶಗೊಂಡು ಸಾವನ್ನಪ್ಪಿರುವ ಕರುಣಾಜನಕ ಘಟನೆ ಸಂಭವಿಸಿದೆ.

ಇಂದು ಮಧ್ಯಾಹ್ನ 1.30ರ ಸುಮಾರಿಗೆ ಕಾಳು ಮೆಣಸು ಕುಯ್ಯುವ ವೇಳೆಯಲ್ಲಿ ಏಣಿ ವಿದ್ಯುತ್ ತಂತಿಗೆ ತಗಲಿದ ಪರಿಣಾಮ ನಂಜನಗೂಡು ಮೂಲದ ಕಾರ್ಮಿಕ ಸ್ವಾಮಿ (27) ಮೃತಪಟ್ಟಿದ್ದು, ಸಿದ್ದಾಪುರ ಠಾಣಾಧಿಕಾರಿ ಸುಬ್ರಮಣ್ಯ ಹಾಗೂ ಸಿಬ್ಬಂದಿ ಸ್ಥಳ ಮಹಜರು ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.