ಕರಿಕೆ, ಫೆ. 11: ಕೇರಳಕ್ಕೆ ಹುಲ್ಲು ಸಾಗಿಸುತ್ತಿದ್ದ ಲಾರಿಯೊಂದು ಇಲ್ಲಿಗೆ ಸಮೀಪದ ಹದಿಮೂರನೇ ಮೈಲು ಎಂಬಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದ ಘಟನೆ ನಡೆದಿದೆ.
ಲಾರಿ ಭಾಗಮಂಡಲ ಕಡೆಯಿಂದ ಕೇರಳದ ರಾಜಪುರಂ ಕಡೆಗೆ ಹುಲ್ಲು ತುಂಬಿಕೊಂಡು ತೆರಳುತ್ತಿದ್ದಾಗ ಘಟನೆ ನಡೆದಿದೆ. ಚಾಲಕ ಸೇರಿದಂತೆ ಇನ್ನಿಬ್ಬರು ಅಪಾಯದಿಂದ ಪಾರಾಗಿದ್ದಾರೆ.