*ಗೋಣಿಕೊಪ್ಪಲು, ಫೆ. 12 : ಕೇರಳದ ತಲಚೇರಿಗೆ ದಕ್ಷಿಣ ಕೊಡಗಿನ ಮೂಲಕ ಹಾದು ಹೋಗುವ ರೈಲು ಮಾರ್ಗ ಯೋಜನೆಗೆ ಅವಕಾಶ ನೀಡುವದಿಲ್ಲ. ಕೊಡಗು - ಮೈಸೂರು ಲೋಕಸಭಾ ಕ್ಷೇತ್ರ ಸದಸ್ಯ ಪ್ರತಾಪ್ ಸಿಂಹ ಹೇಳಿದರು.ಕೇಂದ್ರ ಸರ್ಕಾರದ ರಸ್ತೆ ಅಭಿವೃದ್ಧಿ ನಿಧಿ (ಸಿ.ಆರ್.ಡಿ) ಯಿಂದ ಮೂರು ಕೋಟಿ ವೆಚ್ಚದಲ್ಲಿ ಗೋಣಿಕೊಪ್ಪಲು ಪಟ್ಟಣದ ಮೂರುವರೆ ಕಿ.ಮೀ ಹುಣಸೂರು, ತಲಕಾವೇರಿ ರಾಷ್ಟ್ರೀಯ ಹೆದ್ದಾರಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

ಕೇರಳದ ತಲಚೇರಿಯಿಂದ ಕೊಡಗಿನ ಮೂಲಕ ಮೈಸೂರಿಗೆ ಹಾದು ಹೋಗುವ ರೈಲ್ವೆ ಮಾರ್ಗದ ವಿಚಾರವಾಗಿ ಕೇಂದ್ರದ ರೈಲ್ವೇ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದೇನೆ. ಯಾವದೇ ಕಾರಣಕ್ಕೂ ಕೇರಳದ ಈ ಪ್ರಸ್ತಾವನೆಗೆ ಅನುಮತಿ ನೀಡಬಾರದು ಎಂದು ಮನವಿ ಸಲ್ಲಿಸಲಾಗಿದೆ. ಜನರ ದಿಕ್ಕು ತಪ್ಪಿಸಲು ಕೆಲವರು ಈ ವಿಚಾರದಲ್ಲಿ ಷಡ್ಯಂತರ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಯಾವದೇ ಯೋಜನೆ ಅನುಷ್ಠಾನಗೊಳ್ಳಲು ಸಾಧ್ಯವಿಲ್ಲ. 2011ರಲ್ಲಿ ಕೇಂದ್ರದ ಯು.ಪಿ.ಎ ಆಡಳಿತದಲ್ಲಿದ್ದಾಗ ಕೇರಳ ಸರ್ಕಾರ ನೂತನ ರೈಲ್ವೇ ಮಾರ್ಗಕ್ಕೆ ಅನುಮೋದನೆ ಬಯಸಿತು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕೇರಳ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಈ ವಿಚಾರಗಳನ್ನು ಚರ್ಚೆ ನಡೆಸಿದ್ದಾರಷ್ಟೇ. ಯೋಜನೆಗೆ ಅನುಮತಿ ದೊರೆತಿಲ್ಲ. ರಾಜ್ಯದ ಕಾಂಗ್ರೆಸ್ ಸರ್ಕಾರ ಚುನಾವಣೆಯ ತಂತ್ರವಾಗಿ ಈ ವಿಚಾರವನ್ನು ಮುಂದಿಟ್ಟು ವಿವಾದ ಸೃಷ್ಟಿಸುತ್ತಿದೆ. ರಾಜ್ಯ ಸರ್ಕಾರದ ಅನುಮತಿಯಿಲ್ಲದೆ ಕೇಂದ್ರ ಸರ್ಕಾರವು ರಾಜ್ಯದಲ್ಲಿ ಒಂದು ಸಣ್ಣ ಹುಲ್ಲು ಕಡ್ಡಿಯನ್ನು ನೆಡಲು ಸಹ ಸಾಧ್ಯವಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಮಡಿಕೇರಿಯಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ನಮ್ಮನ್ನು ಗೆಲ್ಲಿಸಿದರೆ ಕೊಡಗಿಗೆ ರೈಲು ತರುತ್ತೇವೆ ಎಂದು ಹೇಳಿದ್ದಾರೆ. ಇದಕ್ಕೆ ವಿರುದ್ಧವಾಗಿ ಸಚಿವರು ಮಾತನಾಡುತ್ತಾರೆ. ಒಟ್ಟಾರೆ ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟತೆ ಅನ್ನುವದು ಇಲ್ಲ; ಜನ ವಿರೋಧಿ ಯೋಜನೆಗಳನ್ನು ಕೇಂದ್ರ ಸರ್ಕಾರ ಪಾಲಿಸುವದಿಲ್ಲ ಎಂದು ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ ಹುಣಸೂರು, ತಲಕಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ 28 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅಮ್ಮತ್ತಿ, ಗೋಣಿಕೊಪ್ಪಲು ಮಾರ್ಗಕ್ಕೆ ರೂ. 6 ಕೋಟಿ ಮತ್ತು ಸಿದ್ದಾಪುರ ಮಾರ್ಗಕ್ಕೆ ರೂ. 5 ಕೋಟಿ ಅನುದಾನ ಬಿಡುಗಡೆಯಾಗಿದೆ. ಪ್ರಥಮ ಹಂತÀದಲ್ಲಿ ಈ ಅನುದಾನ ಬಿಡುಗಡೆಯಾಗಿದ್ದು, ಮೋದಿಯವರ ಬಹುದೊಡ್ಡ ಕೊಡುಗೆ ಇದಾಗಿದೆ. ಮುಂದೆ ಬಿ.ಜೆ.ಪಿ. ರಾಜ್ಯ ಸರ್ಕಾರ ಆಡಳಿತಕ್ಕೆ ಕೇಂದ್ರದ ಅನುದಾನಗಳು ದೊರಕಲಿದೆ. ಸೇತುವೆ ಕಾಮಗಾರಿ ರಸ್ತೆ ಕಾಮಗಾರಿಗಳಿಗೆ ಹೆಚ್ಚಿನ ಅನುದಾನ ಬರಲಿದೆ ಎಂದು ಹೇಳಿದರು. 2004ರಲ್ಲಿ ಯು.ಪಿ. ಸರ್ಕಾರವಿದ್ದಾಗ ಕೇಂದ್ರ ಸರ್ಕಾರದಿಂದ ರಸ್ತೆ ಅಭಿವೃದ್ದಿಗೆ ಕೇವಲ ರೂ. 50 ಲಕ್ಷವಷ್ಟೇ ಅನುದಾನ ಬಿಡುಗಡೆಯಾಗಿತ್ತು. ಮೋದಿ ಸರ್ಕಾರದಲ್ಲಿ ರಸ್ತೆ ಅಭಿವೃದ್ಧಿಗೆ ಜಿಲ್ಲೆಗೆ ಒಂದು ವರ್ಷದ ಒಳಗೆ ಸುಮಾರು ರೂ. 28 ಕೋಟಿ ಹಣ ಬಿಡುಗಡೆಯಾಗಿದೆ. ಅದನ್ನು ರೂ. 33 ಕೋಟಿಗೆ ಏರಿಸುವ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ರಸ್ತೆ ಅಗಲೀಕರಣ ಇಲ್ಲ : ಗೋಣಿಕೊಪ್ಪಲು ಪಟ್ಟಣದ ರಸ್ತೆ ಅಗಲೀಕರಣ ಸಂದರ್ಭ ಕಟ್ಟಡಗಳ ತೆರವು ಕಾರ್ಯ ನಡೆಯಲಿದೆ ಎಂಬ ವರ್ತಕರ ಗೊಂದಲಕ್ಕೆ ಸಂಸದರು ಹಾಗೂ ಶಾಸಕರು ಉತ್ತರ ನೀಡಿದ್ದು, ಯಾವದೇ ಕಾರಣಕ್ಕೂ ಪಟ್ಟಣದಲ್ಲಿ ರಸ್ತೆ ಅಗಲೀಕರಣ ಮಾಡುವದಿಲ್ಲ. ಹರಿಶ್ಚಂದ್ರಪುರದಿಂದ ಪೆÇನ್ನಂಪೇಟೆ ತಿರುವಿನವರೆಗೆ ಮಾತ್ರ ರಸ್ತೆ ಅಗಲಿಕರಣ ಸಂದರ್ಭ ಕಟ್ಟಡಗಳ ತೆರವು ಕಾರ್ಯ ನಡೆಯಲಿದೆ. ಪಟ್ಟಣದ ಒಳಭಾಗದಲ್ಲಿ ಕಟ್ಟಡಗಳನ್ನು ತೆರವುಗೊಳಿಸುವ ಕಾರ್ಯ ನಡೆಯುವದಿಲ್ಲ. ವಾಹನಗಳನ್ನು ಬೈಪಾಸ್ ಮುಖಾಂತರ ಸಂಚರಿಸಲು ಅನುವು ಮಾಡಿಕೊಡಲಾಗುವದು ಎಂದು ವರ್ತಕರ ಪ್ರಶ್ನೆಗೆ ಉತ್ತರಿಸಿದರು.

ಈ ಸಂದರ್ಭ ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್, ಸದಸ್ಯ ಜಯಾ ಪೂವಯ್ಯ, ಜಿಲ್ಲಾ ವರ್ತಕರ ಪ್ರಕೋಷ್ಠ ಅಧ್ಯಕ್ಷ ಗಿರೀಶ್ ಗಣಪತಿ, ತಾಲೂಕು ಮಂಡಳ ಬಿ.ಜೆ.ಪಿ. ಅಧ್ಯಕ್ಷ ಕುಂಞಂಗಡ ಅರುಣ್ ಭೀಮಯ್ಯ, ಕಾರ್ಯದರ್ಶಿ ಲಾಲ ಭೀಮಯ್ಯ, ಜಿಲ್ಲಾ ಬಿಜೆ.ಪಿ. ಯುವ ಮೋರ್ಚಾ ಅಧ್ಯಕ್ಷ ಗಪ್ಪು, ಜಿಲ್ಲಾ ಬಿ.ಜೆಪಿ. ಕಾರ್ಯದರ್ಶಿ ಕಾಂತಿ ಸತೀಶ್, ಆರ್.ಎಂ.ಸಿ. ಸದಸ್ಯ ಚಿಯಕ್‍ಪೂವಂಡ ಸುಬ್ರಮಣಿ, ಗ್ರಾ.ಪಂ. ಸದಸ್ಯೆ ರತಿ ಅಚ್ಚಪ್ಪ, ತಾಲೂಕು ಬಿ.ಜೆ.ಪಿ. ಮಹಿಳಾ ಮೋರ್ಚಾ ಅಧ್ಯಕ್ಷೆ ಚೇಂದಂಡ ಸುಮಿ ಸುಬ್ಬಯ್ಯ, ಜಿಲ್ಲಾ ಉಪಾಧ್ಯಕ್ಷೆ ತಿತೀರ ಊರ್ಮಿಳಾ, ಅಲ್ಪಸಂಖ್ಯಾತರ ಜಿಲ್ಲಾ ಅಧ್ಯಕ್ಷ ಜೋಕಿಂ, ತಾಲೂಕು ಮೋರ್ಚಾ ಅಧ್ಯಕ್ಷ ಹಕೀಂ, ತಾಲೂಕು ಫೆಡರೇಷನ್ ನಿರ್ದೇಶಕ ಮಲ್ಲಂಡ ಮದು ದೇವಯ್ಯ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ರಾಣಿ ನಾರಾಯಣ, ಗೋಣಿಕೊಪ್ಪಲು ಗ್ರಾ.ಪಂ. ಮಾಜಿ ಅಧ್ಯಕ್ಷ ರಾಜೇಶ್ ಕೆ., ಸದಸ್ಯರುಗಳಾದ ಕೊಣಿಯಂಡ ಬೋಜಮ್ಮ, ನಗರ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಗಾಂಧಿ ದೇವಯ್ಯ, ಹಿಂದೂ ಜಾಗರಣ ವೇದಿಕೆ ನಗರ ಅಧ್ಯಕ್ಷ ಕೆ.ಟಿ. ಪೆÇನ್ನಪ್ಪ, ಪ್ರಮುಖರಾದ ಕಬ್ಬಚ್ಚೀರ ಪ್ರಭು, ಮದನ್ ಶೆಟ್ಟಿ ಹಾಗೂ ಕಾರ್ಯಕರ್ತರು ಹಾಜರಿದ್ದರು.