ಸಿದ್ದಾಪುರ, ಫೆ. 12: ವಿಶ್ವದಾದ್ಯಂತ ಸಂಗೀತ ಲೋಕದಲ್ಲಿ ಛಾಪು ಮೂಡಿಸಿರುವ ಉಸ್ತಾದ್ ಹಫೀಜ್ ಬಲೆ ಖಾನ್ ಹಾಗೂ ತಂಡದವರಿಂದ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ 30 ಮಂದಿಯಿಂದ ಏಕಕಾಲದಲ್ಲಿ ಸಿತಾರ್ ವಾದನ ನಡೆಯಲಿದೆ.
ಗುಹ್ಯ ಗ್ರಾಮದ ಗುಹ್ಯ ಶ್ರೀ ಅಗಸ್ತ್ಯೇಶ್ವರ ದೇವಾಲಯದಲ್ಲಿ ಶಿವರಾತ್ರಿ ಪ್ರಯುಕ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಈ ಬಾರಿ ಸಂಗೀತ ಮಾಂತ್ರಿಕ ಉಸ್ತಾದ್ ಹಫೀಜ್ ಬಲೆ ಖಾನ್ ಅವರ ಸಿತಾರ್ ವಾದನ ವಿಶೇಷವಾಗಿದೆ.
ಉಸ್ತಾದ್ ಅಫೀಜ್ ಬಾಲೆ ಖಾನ್ ಅಮೇರಿಕಾ, ಕುವೈತ್, ಲಂಡನ್, ಬರೋಡ ಸೇರಿದಂತೆ ವಿಶ್ವದ ಹಾಗೂ ದೇಶದ ನಾನಾ ಬಾಗದಲ್ಲಿ ತಮ್ಮ ನಾದಸುಧೆಯನ್ನು ಹರಿಸಿದ್ದು, ಜನಮನ್ನಣೆ ಗಳಿಸಿದ್ದಾರೆ.
-ವರದಿ: ವಾಸು ಎ.ಎನ್