ಮಡಿಕೇರಿ, ಫೆ. 9: ಕರ್ನಾಟಕ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿಯಿಂದ ಕೊಡಗು ಜಿಲ್ಲೆಯ ಗ್ರಾಮೀಣ ರಸ್ತೆಗಳ ಕಾಮಗಾರಿಗೆ ರೂ. 393 ಲಕ್ಷ ಹಣ ಬಿಡುಗಡೆಗೊಂಡಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್. ಸೀತಾರಾಂ ಅವರ ವಿಶೇಷ ಪ್ರಯತ್ನದಿಂದ ಅನುದಾನ ಲಭಿಸಿದೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ ತಿಳಿಸಿದ್ದಾರೆ.ಈ ಅನುದಾನದಿಂದ ಕೊಡಗಿನ ಸುಮಾರು 65 ಕಡೆÀಗಳಲ್ಲಿ ಗ್ರಾಮೀಣ ರಸ್ತೆಗಳ ಕಾಮಗಾರಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಹರೀಶ್ ಬೋಪಣ್ಣ ಮಾಹಿತಿ ನೀಡಿದ್ದು, ಕಾಮಗಾರಿ ವಿವರ ಈ ಕೆಳಗಿನಂತಿದೆ.ವೀರಾಜಪೇಟೆ ತಾಲೂಕು ಹುದಿಕೇರಿ ಹೋಬಳಿ ಚೀನಿವಾಡ ಗ್ರಾಮದ ಆಲೀರ ಐನ್‍ಮನೆಗೆ ಹೋಗುವ ರಸ್ತೆಗೆ ತಡೆಗೋಡೆ ನಿರ್ಮಾಣ ರೂ. 3 ಲಕ್ಷ, ವೀರಾಜಪೇಟೆ ನಗರದ ಶಾಪಿ ಜುಮ್ಮಾ ಮಸೀದಿಗೆ ತಡೆಗೋಡೆ ನಿರ್ಮಾಣ ರೂ. 10 ಲಕ್ಷ, ಮಡಿಕೇರಿ ತಾಲೂಕು ಬಲಮುರಿ ಗ್ರಾಮದ ಕಾವೇರಿ ನದಿಯ ತೀರ್ಥ ಸ್ನಾನಕ್ಕೆ ಇಳಿಯಲು ಮೆಟ್ಟಿಲುಗಳ ನಿರ್ಮಾಣ ರೂ. 2 ಲಕ್ಷ, ಸಿದ್ದಾಪುರದ ಹೋಬಳಿ ಕರಡಿಗೋಡು ಗ್ರಾಮದ ಮಹಮ್ಮದ್ ಆಲಿ ಮನೆ ಮುಂದೆ ಹಾದುಹೋಗುವ ರಸ್ತೆಗೆ ತಡೆಗೋಡಗೆ ರೂ. 10ಲಕ್ಷ, ಕೊಂಡಂಗೇರಿ ಸುನ್ನಿ ಮುಸ್ಲಿಂ ಜಮಾಅತ್ ಮಸೀದಿಯ ಪಕ್ಕದ ರಸ್ತೆಗೆ ತಡೆಗೋಡೆ ರೂ. 10ಲಕ್ಷ. ಕಡಗದಾಳು ಗ್ರಾ.ಪಂ. ವ್ಯಾಪ್ತಿಯ ಮಡಿಕೇರಿಯಿಂದ ಚೆಟ್ಟಳ್ಳಿಗೆ ಹೋಗುವ ರಸ್ತೆಯಲ್ಲಿ ಇರ್ಕಂಡ ಮನೆಯಿಂದ ಮಾಲೆರ ಮನೆಗಾಗಿ ಮಹಾದೇವರ ದೇವಸ್ಥಾನದವರೆಗಿನ ರಸ್ತೆ ಡಾಂಬರೀಕರಣ ರೂ. 10 ಲಕ್ಷ, ವೀರಾಜಪೇಟೆಯಲ್ಲಿರುವ ಸೇಂಟ್ ಜಾನ್ಸ್ ಚರ್ಚ್ ಆವರಣದಲ್ಲಿ ಹಾದುಹೋಗುವ ರಸ್ತೆ ಪಕ್ಕ ತಡೆಗೋಡೆ ರೂ. 20ಲಕ್ಷ ಕಲ್ಪಿಸಲಾಗಿದೆ.

ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನ ತರಗತಿ ಕೊಠಡಿ ನಿರ್ಮಾಣಕ್ಕೆ ರೂ. 25 ಲಕ್ಷ, ಮಡಿಕೇರಿ ತಾಲೂಕು ವ್ಯವಸಾಯ ಸೇವಾ ಸಹಕಾರ ಸಂಘದ ಕಚೇರಿ ಸಮೀಪ ತಡೆಗೋಡೆ ನಿರ್ಮಾಣಕ್ಕೆ ರೂ. 5 ಲಕ್ಷ, ಪೊನ್ನಂಪೇಟೆ ಹೋಬಳಿ ಬಿ. ಶೆಟ್ಟಿಗೇರಿ ವ್ಯಾಪ್ತಿಯ ಕುಟ್ಟಂದಿ ಗ್ರಾಮದ ಕೂಟಿಯಾಲು

(ಮೊದಲ ಪುಟದಿಂದ) ರಸ್ತೆಯಿಂದ ಕೊಂಗಾಣ ಆಶ್ರಮ ರಸ್ತೆಗೆ ತಡೆಗೋಡೆಗಾಗಿ ರೂ. 5ಲಕ್ಷ, ನಾಪೋಕ್ಲು ಗ್ರಾಮದ ಅಂಬಿ ಕಾರ್ಯಪ್ಪನವರ ಮನೆಯಿಂದ ಹಾದುಹೋಗುವ ರಸ್ತೆವರೆಗೆ ತಡೆಗೋಡೆ ರೂ. 5 ಲಕ್ಷ ಒದಗಿಸಲಾಗಿದೆ.

ಚೆಂಬೆಬೆಳ್ಳೂರು ವ್ಯಾಪ್ತಿಯ ತೆಕ್ಕಮಕ್ಕಿ ಗ್ರಾಮದ ಗದ್ದೆ ಬಯಲಿನ ನದಿಯ ಬದಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ರೂ. 5 ಲಕ್ಷ, ಕೊಳತ್ತೋಡು - ಬೈಗೋಡು ಗ್ರಾಮದ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಹೋಗುವ ರಸ್ತೆ ಬದಿಗೆ ತಡೆಗೋಡೆ ನಿರ್ಮಾಣಕ್ಕೆ ರೂ 5 ಲಕ್ಷ, ಅಮ್ಮತ್ತಿ - ವೀರಾಜಪೇಟೆ ಮುಖ್ಯರಸ್ತೆಯಿಂದ ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್‍ವರೆಗೆ ತಡೆಗೋಡೆ ನಿರ್ಮಾಣಕ್ಕೆ ರೂ. 5 ಲಕ್ಷ, ಪೊನ್ನಂಪೇಟೆ ನೀನಾದ ಶಾಲೆಯ ಪಕ್ಕದಲ್ಲಿ ಹಾದು ಹೋಗುವ ರಸ್ತೆಗೆ ತಡೆಗೋಡೆ ನಿರ್ಮಾಣಕ್ಕಾಗಿ ರೂ. 5ಲಕ್ಷ, ಮಡಿಕೇರಿ ತಾಲೂಕಿನ ಕೊಣಂಜಗೇರಿ ಪಂಚಾಯಿತಿ ವ್ಯಾಪ್ತಿಯ ಕೈಕಾಡು ಗ್ರಾಮದ ನಾಗಬ್ರಹ್ಮ ದೇವಸ್ಥಾನದ ರಸ್ತೆ ಬದಿ ತಡೆಗೋಡಿಗೆ ರೂ. 3 ಲಕ್ಷ, ಬೇಟೋಳಿ ಗ್ರಾಮದ ಗುಂಡಿಗೆರೆ ಶಾಫಿ ಮುಸ್ಲಿಂ ಜಮಾಯತ್ ಮಸೀದಿ ಪಕ್ಕದ ರಸ್ತೆಯ ಬದಿಗೆ ತಡೆಗೋಡೆ ನಿರ್ಮಾಣಕ್ಕಾಗಿ ರೂ 5 ಲಕ್ಷ, ಬೆಕ್ಕೆಸೊಡ್ಲೂರು ಗ್ರಾಮದ ಮಂದತ್ತವ್ವ ದೇವಾಲಯದ ಪಕ್ಕ ರಸ್ತೆ ತಡೆಗೋಡೆ ನಿರ್ಮಾಣಕ್ಕೆ ರೂ. 5 ಲಕ್ಷ, ಟಿ. ಶೆಟ್ಟಿಗೇರಿ ಪಂಚಾಯಿತಿಯ ಹರಿಹರ ಗ್ರಾಮ ಶ್ರೀ ಬೆಟ್ಟಚಿಕ್ಕಮ್ಮ ದೇವಸ್ಥಾನಕ್ಕೆ ಇಂಟರ್‍ಲಾಕ್ ಅಳವಡಿಕೆಗೆ ರೂ. 3 ಲಕ್ಷ, ಕಾಕೋಟು ಪರಂಬು ಪಂಚಾಯಿತಿಯ ಕಡಂಗ ಮರೂರು ಗ್ರಾಮದ ಮಾರಿಕಮ್ಮ ಯುವಕ ಸಂಘದ ಕಟ್ಟಡಕ್ಕೆ ತಡೆಗೋಡೆ ನಿರ್ಮಾಣಕ್ಕಾಗಿ ರೂ. 3 ಲಕ್ಷ, ಕೊಣಂಜಗೇರಿ ಗ್ರಾ.ಪಂ. ಕೈಕಾಡು ಗ್ರಾಮದ ಕೆ.ಬಿ. ಚಿನ್ನಪ್ಪರವರ ಮನೆಯ ಪಕ್ಕದಲ್ಲಿ ಹಾದುಹೋಗುವ ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆ ರೂ. 1 ಲಕ್ಷ ನೀಡಲಾಗಿದೆ.

ಕೊಣಂಜಗೇರಿ ಗ್ರಾ.ಪಂ. ಕೈಕಾಡು ಗ್ರಾಮದ ಪಾಡೆಯಂಡ ವಿಠಲ ಮನೆಯ ರಸ್ತೆವರೆಗೆ ತಡೆಗೋಡೆ ನಿರ್ಮಾಣಕ್ಕೆ ರೂ. 2 ಲಕ್ಷ, ನರಿಯಂದಡ ಗ್ರಾ.ಪಂ. ಕರಡ ಗ್ರಾಮದ ಬಿ.ಎಮ್. ಕಾಳಪ್ಪ ಮನೆಯ ಹಿಂಭಾಗದ ರಸ್ತೆಗೆ ತಡೆಗೋಡೆ ನಿರ್ಮಾಣಕ್ಕೆ ರೂ. 3 ಲಕ್ಷ, ನಾಲ್ಕೇರಿ ಗ್ರಾ.ಪಂ. ವ್ಯಾಪ್ತಿಯ ಅಲ್ಲುಮಾಡ ಸುರೇಶ್ ಮನೆಯ ಮುಂದೆ ಈಶ್ವರ ದೇವಸ್ಥಾನದ ಮುಖ್ಯರಸ್ತೆ ಪಕ್ಕ ತಡೆಗೋಡೆ ನಿರ್ಮಾಣಕ್ಕೆ ರೂ. 3 ಲಕ್ಷ ನೀಡಲಾಗಿದೆ. ಚೆಂಬೆಬೆಳ್ಳೂರು ಗ್ರಾ.ಪಂ. ಮಗ್ಗುಲ ಗ್ರಾಮದ ಚೋಕಂಡ ಐನ್‍ಮನೆ ಹಾಗೂ ಪೂಜಿಸುವ ಬೀರಂಗಲ್ಲಿಗೆ ಹೋಗುವ ರಸ್ತೆಗೆ ಕಾಂಕ್ರೀಟ್ ನಿರ್ಮಾಣಕ್ಕಾಗಿ ರೂ. 2ಲಕ್ಷ, ಬೆಕ್ಕೆಸೊಡ್ಲೂರು ಗ್ರಾಮದ ಶ್ರೀ ಶಾರದಾ ವಿದ್ಯಾಸಂಸ್ಥೆಯ ಮುಂಭಾಗ ರಸ್ತೆ ಬದಿ ತಡೆಗೋಡೆಗೆ ರೂ. 3 ಲಕ್ಷ, ಕಕ್ಕಬ್ಬೆ ಪಂಚಾಯಿತಿ ವ್ಯಾಪ್ತಿಯ ಹೈಸ್ಕೂಲು ರಸ್ತೆ ನದಿದಡಕ್ಕೆ ತಡೆಗೋಡೆಗಾಗಿ ರೂ. 5 ಲಕ್ಷ, ಚೆಂಬೆಬೆಳ್ಳೂರು ಮಗ್ಗುಲ ಮಾರ್ಗವಾಗಿ ನಲವತ್ತೊಕ್ಲುಗೆ ಹೋಗುವ ರಸ್ತೆ ಡಾಂಬರೀಕರಣಕ್ಕೆ ರೂ. 20 ಲಕ್ಷ, ಪಾಲಿಬೆಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಾಂಧಿಹಳ್ಳಿಗೆ ಹೋಗುವ ರಸ್ತೆ 20 ಮೀಟರ್ ಕಾಂಕ್ರಿಟ್ ಮತ್ತು 80 ಮೀಟರ್ ಡಾಂಬರೀಕರಣಕ್ಕೆ ರೂ. 4 ಲಕ್ಷ ಒದಗಿಸಲಾಗಿದೆ.

ದೇವರಪುರ ಗ್ರಾಮ ಪಂಚಾಯಿತಿಯ 11ನೇ ಮೈಲು ಮರಡಿಪೋದಿಂದ ಬಲಭಾಗದ ಮಾಳೇಟಿರ ಸುಬ್ರಮಣಿ ಕುಟುಂಬಸ್ಥರ ಸಾರ್ವಜನಿಕ ರಸ್ತೆ ಡಾಂಬರೀಕರಣಕ್ಕೆ ರೂ. 3 ಲಕ್ಷ, ಬಿಟ್ಟಂಗಾಲ ಪಂಚಾಯಿತಿಯ ಕಂಡಂಗಾಲ ಗ್ರಾಮದ ಶಾಲೆಯ ಕೆಳಭಾಗದ (ರುದ್ರಗುಪ್ಪೆ) ಮೇಚಿಯಂಡ ಮನೆಗಾಗಿ ಊರಿನ ಅಂಬರ ರಸ್ತೆ ಡಾಂಬರೀಕರಣಕ್ಕೆ ರೂ. 3 ಲಕ್ಷ, ಕೆದಮುಳ್ಳೂರು ಗ್ರಾಮದ ಮುಖ್ಯ ರಸ್ತೆಯಿಂದ ಮಾಳೇಟ್ಟಿರ ವಿಜಯ ಮಂದಣ್ಣನವರ ಮನೆ ಮುಂದಿನ ಸಾರ್ವಜನಿಕ ರಸ್ತೆ ಡಾಂಬರೀಕರಣಕ್ಕೆ ರೂ. 3 ಲಕ್ಷ, ಕೆದಮುಳ್ಳೂರು ಗ್ರಾಮದ ಮುಖ್ಯ ರಸ್ತೆಯಿಂದ ಮಾಳೇಟ್ಟಿರ ವಿಜಯ ಮಂದಣ್ಣನವರ ಮನೆ ಮುಂದಿನ ಸಾರ್ವಜನಿಕ ರಸ್ತೆ ಡಾಂಬರೀಕರಣಕ್ಕೆ ರೂ. 3 ಲಕ್ಷ, ಪೊನ್ನಂಪೇಟೆ ಕೊಡವ ಸಮಾಜದ ಪಕ್ಕದಲ್ಲಿರುವ ರಸ್ತೆ ಕಾಂಕ್ರೀಟಿಕರಣಕ್ಕೆ ರೂ. 5 ಲಕ್ಷ, ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಐಮಂಗಲ - ಚೆಂಬೆಬೆಳ್ಳೂರು ಲಿಂಕ್ ರಸ್ತೆಯ ಡಾಂಬರೀಕರಣಕ್ಕೆ ರೂ. 5 ಲಕ್ಷ, ನಾಪೋಕ್ಲು ಕೊಡವ ಸಮಾಜದ ರಸ್ತೆ ಪಕ್ಕದಲ್ಲಿ ತಡೆಗೋಡೆ ನಿರ್ಮಾಣಕ್ಕೆ ರೂ. 5 ಲಕ್ಷ, ಕುಂದಚೇರಿ ಗ್ರಾಮದ ಕೆದಂಬಾಡಿ ವಿಶ್ವನಾಥ್ ಮನೆಯ ಪಕ್ಕದಲ್ಲಿ ಕಿರು ಸೇತುವೆ ನಿರ್ಮಾಣಕ್ಕೆ ರೂ. 3 ಲಕ್ಷ, ಭಾಗಮಂಡಲ ಗೌಡ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ರೂ. 8 ಲಕ್ಷ ಕಲ್ಪಿಸಲಾಗಿದೆ.

ಹೊದ್ದೂರು ಗ್ರಾಮ ಪಂಚಾಯಿತಿ ಕೊಟ್ಟಮುಡಿ ಗ್ರಾಮದ ಮರ್ಕಜ್ ಶಾಲೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ತಡೆಗೋಡೆ ನಿರ್ಮಾಣಕ್ಕೆ ರೂ. 5 ಲಕ್ಷ, ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪೇರೂರು ಶ್ರೀ ಇಗ್ಗುತಪ್ಪ ದೇವಸ್ಥಾನದ ಸಮುದಾಯ ಭವನದ ಮುಂಭಾಗದಲ್ಲಿ ನೆಲಹಾಸು ಕಾಂಕ್ರೀಟಿಕರಣಕ್ಕೆ ರೂ. 3 ಲಕ್ಷ, ಬೇಂಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಗದಾಳು ಗ್ರಾಮ (ಪಾಕ) ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮುಂಭಾಗದಲ್ಲಿ ನೆಲಹಾಸು ಕಾಂಕ್ರೀಟಿಕರಣಕ್ಕೆ ರೂ. 3 ಲಕ್ಷ, ಮಕ್ಕಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಕ್ಕೋಡ್ಲು ಗ್ರಾಮ ಎಸ್.ಕೆ. ಅಚ್ಚಯ್ಯ ಮನೆ ಮುಂದೆ ಹೋಗುವ ಸಾರ್ವಜನಿಕ ರಸ್ತೆಯ ಕಾಂಕ್ರೀಟಿಕರಣಕ್ಕೆ ರೂ. 10 ಲಕ್ಷ, ಹುದಿಕೇರಿ ಗ್ರಾಮದ ಮುಕ್ಕಟ್ಟಿಮನೆ ಮುಂದೆ ಹೋಗುವ ಸಾರ್ವಜನಿಕ ರಸ್ತೆ ಡಾಂಬರೀಕರಣಕ್ಕೆ ರೂ. 5 ಲಕ್ಷ, ಅಮ್ಮತ್ತಿ ಗ್ರಾಮ ಪಂಚಾಯಿತಿ ಪುಲಿಯೇರಿ ಗ್ರಾಮ ಇಂಜಲಗೆರೆಯಿಂದ ಕಣ್ಣಂಗಾಲಕ್ಕೆ ಹೋಗುವ ರಸ್ತೆಯ ಬದಿ ತಡೆಗೋಡೆ ನಿರ್ಮಾಣಕ್ಕೆ ರೂ. 5 ಲಕ್ಷ ನೀಡಲಾಗಿದೆ.

ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೇರಿಯಿಂದ ಕನ್ನಂಬೀರ ಭಗವತಿ ದೇವಸ್ಥಾನ ಮುಖಾಂತರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಹೋಗುವ ರಸ್ತೆ ಡಾಂಬರೀಕರಣಕ್ಕೆ ರೂ. 5 ಲಕ್ಷ, ಕಲ್ಲುಬಾಳೆ ಗ್ರಾಮದ ಆರ್ಜಿ ಪಂಚಾಯಿತಿಯ ಕಬರಸ್ಥಾನಕ್ಕೆ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ರೂ. 10 ಲಕ್ಷ, ನೆಲಜಿ ಗ್ರಾಮದ ನೆಲಜಿ ಶ್ರೀ ಇಗ್ಗುತಪ್ಪ ದೇವಸ್ಥಾನದ ಮುಂಭಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ರೂ. 10ಲಕ್ಷ, ಸೋಮವಾರಪೇಟೆ ತಾಲೂಕು ತೋಳೂರು ಶೆಟ್ಟಳ್ಳಿ ಪಂಚಾಯಿತಿ ದೊಡ್ಡಮನೆ ಕೊಪ್ಪ ರಸ್ತೆಯಲ್ಲಿ 4 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ರೂ. 20ಲಕ್ಷ, ಅಮ್ಮತ್ತಿ ಗ್ರಾಮ ಪಂಚಾಯಿತಿ ಪುಲಿಯೇರಿ ಗ್ರಾಮ ಕಣ್ಣಂಗಾಲ ರಸ್ತೆಯಿಂದ ರಾಧಾಕೃಷ್ಣ ಮನೆಯಿಂದ ಮುಂದೆ ಸಾಗುವ ಎಸ್‍ಎನ್‍ಡಿಪಿ ಸಮುದಾಯ ಭವನದ ಕಡೆಗೆ ಹಾದು ಹೋಗುವ ರಸ್ತೆ ಡಾಂಬರೀಕರಣಕ್ಕೆ ರೂ. 20 ಲಕ್ಷ, ಬಿಟ್ಟಂಗಾಲ ಗ್ರಾ.ಪಂ. ಅಂಬಟ್ಟಿ ಗ್ರಾಮ ಅಂಬಟ್ಟಿ - ಮಗ್ಗುಲ ಲಿಂಕ್ ರಸ್ತೆ ಡಾಂಬರೀಕರಣಕ್ಕೆ ರೂ. 15 ಲಕ್ಷ ಲಭಿಸಿದೆ.

ಶ್ರೀಮಂಗಲ ಗ್ರಾಮದ ಶ್ರೀ ಕೃಷ್ಣ ದೇವಸ್ಥಾನದ ರಸ್ತೆಯ ಬದಿಗೆ ತಡೆಗೋಡೆ ನಿರ್ಮಾಣಕ್ಕೆ ರೂ. 5 ಲಕ್ಷ, ಟಿ. ಶೆಟ್ಟಿಗೇರಿ ಗ್ರಾಮದಲ್ಲಿರುವ ಗ್ರಾ.ಪಂ. ಕಟ್ಟಡದ ನಿರ್ಮಾಣಕ್ಕೆ ರೂ. 5 ಲಕ್ಷ, ಸಿದ್ದಾಪುರ ಪಟ್ಟಣದ ಬಸ್ ನಿಲ್ದಾಣದ ಪುನರ್ ನಿರ್ಮಾಣಕ್ಕೆ ರೂ. 10ಲಕ್ಷ, ಅರವತ್ತೋಕ್ಲು ಗ್ರಾ.ಪಂ. ವ್ಯಾಪ್ತಿಯ ಓಯಸಿಸ್ ಕ್ಲಬ್ ಪಕ್ಕದ ಬಾಳಾಜಿ ಲಿಂಕ್ ರಸ್ತೆ ಡಾಂಬರೀಕರಣಕ್ಕೆ ರೂ. 5 ಲಕ್ಷ ಒದಗಿಸಲಾಗಿದೆ.

ವೀರಾಜಪೇಟೆ ನಿಟ್ಟೂರು ಗ್ರಾ.ಪಂ. ವ್ಯಾಪ್ತಿಯ ಕೊಟ್ಟಗೇರಿ ಗ್ರಾಮದ ಅರಮಣಮಾಡ ಕುಟುಂಬಸ್ಥರ ಮನೆಗೆ ಹಾದು ಹೋಗುವ ಸಾರ್ವಜನಿಕ ರಸ್ತೆ ಡಾಂಬರೀಕರಣಕ್ಕೆ ರೂ. 3 ಲಕ್ಷ, ವೀರಾಜಪೇಟೆ ತಾಲೂಕು ಮಾಯಮುಡಿ ಗ್ರಾ.ಪಂ. ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ. 4 ಲಕ್ಷ, ಮರಗೋಡು ಗ್ರಾ.ಪಂ. ವ್ಯಾಪ್ತಿಯ ಮರಗೋಡು ಅಮ್ಮನೂರು ದೇವಸ್ಥಾನದ ಬಲಭಾಗದಿಂದ ಕೇನೆರ ಹಾಗೂ ಕೊಂಪುಳಿರ ಕುಟುಂಬಸ್ಥರ ಮನೆಗೆ ಹೋಗುವ ಸಾರ್ವಜನಿಕ ರಸ್ತೆ ಡಾಂಬರೀಕರಣಕ್ಕೆ ರೂ. 3 ಲಕ್ಷ, ನರಿಯಂದಡ ಗ್ರಾ.ಪಂ. ವ್ಯಾಪ್ತಿಯ ಚೆಯ್ಯಂಡಾಣೆ ಕೊಡವ ಸಮಾಜ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ 5 ಲಕ್ಷ ನೀಡಲಾಗಿದೆ.

ಮೇಕೇರಿ ಗ್ರಾ.ಪಂ. ವ್ಯಾಪ್ತಿಯ ಬಿಳಿಗೇರಿ ಗ್ರಾಮದ ಮಂಞÂ್ಞರ ಕುಶಾಲಪ್ಪ ಜಾಗಕ್ಕಾಗಿ ಹಾದು ಗದ್ದೆಯನ್ನು ಸಂಪರ್ಕಿಸುವ ಸಾರ್ವಜನಿಕ ರಸ್ತೆಯಲ್ಲಿ ಇರುವ ತೋಡಿಗೆ ಕಾಲು ಸೇತುವೆ ನಿರ್ಮಾಣಕ್ಕೆ ರೂ. 3ಲಕ್ಷ, ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ತಂತಿಪಾಲ ಸೇತುವೆಯಿಂದ ಮುಕ್ಕೋಡ್ಲುವಿಗೆ ಹೋಗುವ ರಸ್ತೆ ಡಾಂಬರೀಕರಣಕ್ಕೆ ರೂ. 4 ಲಕ್ಷ, ನರಿಯಂದಡ ಗ್ರಾಮದ ಮಹಿಳಾ ಸಮಾಜದ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ. 3 ಲಕ್ಷ, ಬೇಂಗೂರು ಗ್ರಾ.ಪಂ. ವ್ಯಾಪ್ತಿಯ ಚೇರಂಬಾಣೆ ಕೊಡವ ಸಮಾಜ ಕಟ್ಟಡ ನಿರ್ಮಾಣ ಕಾಮಗಾರಿಗೆ ರೂ. 5 ಲಕ್ಷ ಒದಗಿಸಲಾಗಿದೆ ಎಂದು ಹರೀಶ್ ಬೋಪಣ್ಣ ತಿಳಿಸಿದ್ದಾರೆ.