ಮಡಿಕೇರಿ, ಫೆ. 8: ಕೊಡವ ಸಮಾಜಗಳ ಒಕ್ಕೂಟದ ಕೊಡವ ಪೊಮ್ಮಕ್ಕಡ ಸಂಘದ ವತಿಯಿಂದ ಕೊಡಗು ಹಾಗೂ ಕೊಡಗಿನ ವಿವಿಧೆಡೆ ಇರುವ ಕೊಡವ ಪೊಮ್ಮಕ್ಕಡ ಸಂಘವನ್ನು ಒಂದುಗೂಡಿಸಿ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ.

ಈ ನಿಟ್ಟಿನಲ್ಲಿ ತಾ. 15 ರಂದು ಬಾಳುಗೋಡುವಿನಲ್ಲಿ ಎಲ್ಲ ಕೊಡವ ಪೊಮ್ಮಕ್ಕಡ ಅಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರ ಸಭೆಯನ್ನು ಚಿರಿಯಪಂಡ ಇಮ್ಮಿ ಉತ್ತಪ್ಪ ಅಧ್ಯಕ್ಷತೆಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಭಾಗವಹಿಸಲಿದ್ದಾರೆ.

ಹೆಚ್ಚಿನ ಮಾಹಿತಿಗೆ 9448149064, 9741213440 ಸಂಪರ್ಕಿಸಬಹುದು.