ಗೋಣಿಕೊಪ್ಪ ವರದಿ, ಫೆ. 8 : ದಕ್ಷಿಣ ಕೊಡಗಿನ ಬಹುತೇಕ ಗ್ರಾಮಗಳಿಗೆ ಗುರುವಾರ ಸಂಜೆ ತುಂತುರು ಮಳೆಯಾಗಿದೆ. ಟಿ. ಶೆಟ್ಟಿಗೇರಿ, ಬಿರುನಾಣಿ ಹೈಸ್ಕೂಲ್ ಸುತ್ತಮುತ್ತ 20 ಸೆಂಟ್ ಮಳೆ ಸುರಿಯಿತು. ಗೋಣಿಕೊಪ್ಪ ಪಟ್ಟಣದಲ್ಲಿ ಗುಡುಗು ಸಹಿತಿ ತುಂತುರು ಮಳೆಯಾಯಿತು. ಉಳಿದಂತೆ ಕಾನೂರು, ಕೋತೂರು, ಮಾಯಮುಡಿ, ಬಾಳೆಲೆ, ಟಿ. ಶೆಟ್ಟಿಗೇರಿ ಗ್ರಾಮಗಳ ಸುತ್ತ ತುಂತುರು ಮಳೆ ಜನರಲ್ಲಿ ಆಶಾಭಾವನೆ ಮೂಡಿಸಿತು. ಗುಡುಗು ಮಿಂಚು ಹೆಚ್ಚಾಗಿ ಕಂಡು ಬಂತು. ತಂಗಾಳಿ ತಂಪಿನ ವಾತಾವರಣ ನಿರ್ಮಿಸಿತು.