ಮಡಿಕೇರಿ, ಫೆ. 8: ಕೊಯನಾಡುವಿನ ಗುಡ್ಡಗದ್ದೆ ಎಂಬಲ್ಲಿ ತಾ. 2 ರಂದು ನಕ್ಸಲರು ಕಾಣಿಸಿಕೊಂಡಿದ್ದ ಪ್ರಕರಣ ಸಂಬಂಧ ಕಾರ್ಯಾಚರಣೆ ಮುಂದುವರೆದಿದೆ. ಕರ್ನಾಟಕ ನಕ್ಸಲ್ ನಿಗ್ರಹ ದಳದೊಂದಿಗೆ, ಕೊಡಗು ಪೊಲೀಸ್ ತಂಡ ಶೋಧ ನಿರತವಾಗಿದೆ. ನೆರೆಯ ಕೇರಳ ಪೊಲೀಸರು ಕೂಡ ಗಡಿಭಾಗಗಳಲ್ಲಿ ನಕ್ಸಲರ ನಿಗ್ರಹಕ್ಕೆ ಕೋಂಬಿಂಗ್‍ನಲ್ಲಿ ತೊಡಗಿರುವದಾಗಿ ಜಿಲ್ಲಾ ಪೊಲೀಸ್ ಅಧೀಕ್ಷಕ ಪಿ. ರಾಜೇಂದ್ರ ಪ್ರಸಾದ್ ಸುಳಿವು ನೀಡಿದ್ದಾರೆ.