ವೀರಾಜಪೇಟೆ, ಫೆ. 7: ಉದ್ಭವ ಲಿಂಗದ ಖ್ಯಾತಿವೆತ್ತ ಕೊಟ್ಟೋಳಿ ಗ್ರಾಮದ ಶ್ರೀ ಧಾರ ಮಹೇಶ್ವರ ದೇವಾಲಯದಲ್ಲಿ ಶ್ರೀ ನಾಗದೇವರ ಪುನರ್ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.

ಪುರೋಹಿತ ಗೋಪಾಲಕೃಷ್ಣ ಭಟ್ ನೇತೃತ್ವದಲ್ಲಿ ದೇವಾಲಯದ ಪ್ರಧಾನ ಅರ್ಚಕ ಮಂಜುನಾಥ್ ಭಟ್ ಸೇರಿದಂತೆ ಸಹ ಪುರೋಹಿತ ವೃಂದದ ಸಮ್ಮುಖದಲ್ಲಿ ನಿರ್ಮಾಣಗೊಂಡ ನಾಗ ದೇವರಿಗೆ ನಾನಾ ವಿಧದ ಪೂಜಾ ಕೈಂಕರ್ಯಗಳು ನಡೆದವು. 2.45ರ ಹೊತ್ತಿಗೆ ದೇವರಿಗೆ ಮಾಹಾಪೂಜೆ ಸಲ್ಲಿಸುವ ಮೂಲಕ ಸಮಾಪ್ತಿಯಾಯಿತು. ಭಕ್ತರಿಗೆ ಅನ್ನ ಸಂತರ್ಪಣೆ ನಡೆಯಿತು.

ದೇಗುಲದ ಆಡಳಿತ ಮಂಡಳಿಯ ಕಾರ್ಯದÀರ್ಶಿ ಸಿ.ಯು. ರತ್ನ ಅವರು ಪತ್ರಿಕೆಯೊಂದಿಗೆ ಮಾತನಾಡಿ, ದೇವಾಲಯದ ಮುಂಭಾಗದಲ್ಲಿ ಬೃಹತ್ ಆಲದ ಮರುವೊಂದಿತ್ತು. ಈ ಮರದ ಕೆಳಭಾಗದಲ್ಲಿ ಶ್ರೀ ನಾಗ ದೇವರ ಮೂರ್ತಿಯನ್ನು ಪ್ರತಿಷ್ಠೆ ಮಾಡಲಾಗಿತ್ತು. ಕೆಲವು ವರ್ಷಗಳ ಹಿಂದೆ ಸುರಿದ ಭಾರೀ ಮಳೆಗೆ ಆಲದ ಮರವು ಕುಸಿದು ಬಿದ್ದ ಮರದ ತಟದಲ್ಲಿದ್ದ ನಾಗನ ಪ್ರತಿಮೆಯು ಭಗ್ನವಾಗಿತ್ತು ಎಂದರು. ನಂತರದಲ್ಲಿ ಗ್ರಾಮಸ್ಥರು ಪರಿಹಾರದ ರೂಪದಲ್ಲಿ ನಾಗ ದೇವನ ಆಲಯ ಮಾಡುವ ಸಂಕಲ್ಪತೊಟ್ಟಿದ್ದು, ಅದರಂತೆ ಇಂದು ಆಲದ ಮರದ ಸುತ್ತಲು ತಡೆಗೊಡೆ ನಿರ್ಮಾಣ ಮಾಡಲಾಗಿದೆ. ಆಲದ ಮರಕ್ಕೆ ಹೊಂದಿಕೊಂಡಂತೆ ನೂತನವಾಗಿ ನಾಗ ದೇವರ ಆಲಯವನ್ನು ಪುನರ್ ನಿರ್ಮಾಣ ಮಾಡಲಾಗಿದ್ದು ಶ್ರೀ ಸುಬ್ರಮಣ್ಯ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗಿದೆ ಎಂದು ವಿವರಿಸಿದರು.

ಆಡಳಿತ ಮಂಡಳಿಯ ಅಧ್ಯಕ್ಷ ಕೊದಂಡ ಮನ್ನಾ ಮಂದಣ್ಣ, ನಿದೆರ್Éೀಶಕರಾದ ಕೆ.ಜೆ. ಶಿವಪ್ರಸಾದ್, ಕೊಟ್ಟಂಗಡ ಗುಪ್ತ., ಸಿ.ಜಿ. ಸುಬ್ರಮಣಿ, ಸಿ.ಕೆ. ವೇಣು ಹಾಗೂ ವಿವಿಧ ಭಾಗಗಳಿಂದ ಆಗಮಿಸಿದ್ದ ಗ್ರಾಮಸ್ಥರು ಹಾಜರಿದ್ದರು.