ಮಡಿಕೇರಿ, ಫೆ. 7: ನಿನ್ನೆ ಇಲ್ಲಿನ ಅರಣ್ಯ ಭವನ ಬಳಿ ಗುಂಡೇಟಿನಿಂದ ಘಾಸಿಗೊಂಡು ಮೃತಪಟ್ಟಿದ್ದ ಕಡವೆಯ ಕಳೇಬರವನ್ನು ಇಂದು ನ್ಯಾಯಾಲ ಯದ ನಿರ್ದೇಶನದಂತೆ ಸುಟ್ಟುಹಾಕಿರು ವದಾಗಿ ಅರಣ್ಯ ಇಲಾಖೆಯ ಮೂಲಗಳಿಂದ ಗೊತ್ತಾಗಿದೆ.
ಯಾರೋ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಹಾಕಿದ್ದ ಕಡವೆಯ ದೇಹವನ್ನು ನಿನ್ನೆ ಮರಣೋತ್ತರ ಪರೀಕ್ಷೆ ನಡೆಸಿದ್ದು, ಇಂದು ಮತ್ತೆ ತಜ್ಞ ವೈದ್ಯರು ಪರೀಕ್ಷೆ ಮುಂದುವರಿಸಿ, ಸಂಗ್ರಹಿಸಲಾದ ತುಣುಕುಗಳನ್ನು ಹೈದರಾಬಾದ್ನಲ್ಲಿರುವ ಪ್ರಯೋಗಾಲ ಯಕ್ಕೆ ಕಳುಹಿಸಿಕೊಟ್ಟಿದ್ದಾಗಿ ಮಾಹಿತಿ ಲಭಿಸಿದೆ.
ಅಲ್ಲದೆ ಸ್ಥಳೀಯ ನ್ಯಾಯಾಲಯದ ನಿರ್ದೇಶನದಂತೆ ಪಂಚನಾಮೆಯೊಂದಿಗೆ ಅರಣ್ಯ ಭವನ ಬಳಿಯ ನರ್ಸರಿ ಜಾಗದಲ್ಲಿ ಕಡವೆಯ ಕಳೇಬರವನ್ನು ಅದರ ಕೋಡುಗಳ ಸಹಿತ ದಹಿಸಿರುವದಾಗಿ ಇಲಾಖೆಯ ಮೂಲಗಳು ಖಚಿತಪಡಿಸಿವೆ.