ಸಿದ್ದಾಪುರ, ಫೆ. 7: ಮಾಲ್ದಾರೆ ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘದ ವತಿಯಿಂದ ಬೆಂಕಿಯಿಂದ ಅರಣ್ಯ ಸಂರಕ್ಷಿಸುವ ಅಭಿಯಾನ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಮಾಲ್ದಾರೆಯಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಕುರಿತು ಮಾಲ್ದಾರೆ ಪ್ರೌಢಶಾಲೆಯ ಶಿಕ್ಷಕ ಸತ್ಯನಾರಾಯಣ, ಆರ್.ಎಫ್.ಓ. ಮಂಜುನಾಥ್ ಮಾತನಾಡಿದರು. ಇದೇ ಸಂದರ್ಭ ನೆಲ್ಲಿಹುದಿಕೇರಿಯ ಡೋಮಿನೋಸ್ ಕ್ಲಬ್ ಹಾಗೂ ಸಂಘಟನೆಗಳು ರಸ್ತೆ ಬದಿಯಲ್ಲಿದ್ದ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ತೆಗೆದು ಸ್ವಚ್ಛಗೊಳಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ಮಾಲ್ದಾರೆ ಗ್ರಾ.ಪಂ. ಅಧ್ಯಕ್ಷೆ ರಾಣಿ, ಆರ್.ಎಫ್.ಓ. ಅಶೋಕ್, ಶ್ರೀನಿವಾಸ್, ಗ್ರಾ.ಪಂ. ಉಪಾಧ್ಯಕ್ಷ ರಾಜು, ಮುಖ್ಯ ಶಿಕ್ಷಕ ಶಿವರಾಮ್, ಬೆಳೆಗಾರ ಮಿಟ್ಟು ನಂಜಪ್ಪ ಇತರರು ಹಾಜರಿದ್ದರು. ಕಲಾವಿದ ಬಾವ ಮಾಲ್ದಾರೆ ಸ್ವಾಗತಿಸಿ, ವಂದಿಸಿದರು.