14,460 ಬಂಕರ್‍ಗಳ ನಿರ್ಮಾಣಕ್ಕೆ ಅನುಮತಿ
ನವದೆಹಲಿ, ಫೆ. 6: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ ಪಾಕಿಸ್ತಾನ ಸೇನೆ ನಿರಂತರ ಅಪ್ರಚೋದಿತ ಗುಂಡಿನ ಧಾಳಿಯಲ್ಲಿ ತೊಡಗಿರುವದರಿಂದ ಗಡಿ ಪ್ರದೇಶದಲ್ಲಿ ವಾಸವಾಗಿರುವ ಭಾರತೀಯರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಮಂಗಳವಾರ 14,460 ಬಂಕರ್‍ಗಳ ನಿರ್ಮಾಣಕ್ಕೆ ಅನುಮತಿ ನೀಡಿದೆ. ಅಂತರರಾಷ್ಟ್ರೀಯ ಗಡಿ ಮತ್ತು ಗಡಿ ನಿಯಂತ್ರಣ ರೇಖೆಯ ನಿವಾಸಿಗಳ ಪ್ರಾಣ ರಕ್ಷಣೆಗಾಗಿ 14,460 ಬಂಕರ್‍ಗಳನ್ನು ನಿರ್ಮಿಸುವ ಪ್ರಸ್ತಾವನೆಗೆ ಇತ್ತೀಚಿಗೆ ಗೃಹ ಸಚಿವಾಲಯ ಒಪ್ಪಿಗೆ ನೀಡಿದೆ ಎಂದು ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಆಹಿರ್ ಇಂದು ಲೋಕಸಭೆಗೆ ತಿಳಿಸಿದರು. ಕಾಶ್ಮೀರದ ಸಾಂಬಾ, ಜಮ್ಮು, ಕಥುವಾ, ಪೂಂಚ್ ಮತ್ತು ರಾಜೋರಿ ಜಿಲ್ಲೆಯಗಳ ಗಡಿ ಭಾಗಗಳಲ್ಲಿ ನಿರ್ಮಿಸಲ್ಪಡುವ ಈ ಬಂಕರ್‍ಗಳ ಪೈಕಿ 1,431 ಬಂಕರ್‍ಗಳು ಸಮುದಾಯ ಬಂಕರ್‍ಗಳಾಗಿದ್ದು, ಉಳಿದ 13,029 ಬಂಕರ್‍ಗಳು ವೈಯಕ್ತಿಕ ಬಂಕರ್‍ಗಳಾಗಿವೆ. ಜಮ್ಮು ಮತ್ತು ಕಾಶ್ಮೀರ ಸರ್ಕಾರ ಈ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ ಲಿಖಿತ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಬಂಧಿತ ಪಾಕ್ ಉಗ್ರ ಪರಾರಿ
ಶ್ರೀನಗರ, ಫೆ. 6: ಬಂಧಿತ ಉಗ್ರನನ್ನು ವೈದ್ಯಕೀಯ ತಪಾಸಣೆಗೆ ಆಸ್ಪತ್ರೆಗೆ ಕರೆತಂದಿದ್ದ ವೇಳೆ ಉಗ್ರರು ಆಸ್ಪತ್ರೆ ಮೇಲೆ ಗುಂಡಿನ ಧಾಳಿ ನಡೆಸಿದ್ದು, ಧಾಳಿಯಲ್ಲಿ ಇಬ್ಬರು ಪೆÇಲೀಸರು ಹುತಾತ್ಮರಾಗಿದ್ದಾರೆ. ಅಲ್ಲದೆ ಬಂಧಿತ ಪಾಕಿಸ್ತಾನ ಮೂಲದ ಉಗ್ರಗಾಮಿ ಪರಾರಿಯಾಗಿದ್ದಾನೆ ಎಂದು ಪೆÇಲೀಸರು ತಿಳಿಸಿದ್ದಾರೆ. ಜಮ್ಮು-ಕಾಶ್ಮೀರದ ರಾಜಧಾನಿ ಶ್ರೀನಗರದ ಶ್ರೀಮಹಾರಾಜ್ ಹರಿ ಸಿಂಗ್ (ಎಸ್‍ಎಂಹೆಚ್‍ಎಸ್) ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, ಪೆÇಲೀಸರು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಪೆÇಲೀಸರು ಹುತಾತ್ಮರಾಗಿದ್ದಾರೆ. ಅಂತೆಯೇ ಘಟನೆಯಲ್ಲಿ ಇಬ್ಬರು ಪೆÇಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೂಲಗಳ ಪ್ರಕಾರ ಈ ಹಿಂದೆ ಶೋಪಿಯಾನ್‍ನಲ್ಲಿ ನಡೆದ ಸೇನಾ ಕಾರ್ಯಾಚರಣೆ ವೇಳೆ ಪಾಕಿಸ್ತಾನ ಮೂಲದ ಉಗ್ರಗಾಮಿ ನವೀದ್ ಜಟ್ಟ್ ಎಂಬಾತನನ್ನು ಬಂಧಿಸಲಾಗಿತ್ತು. ಈತನನ್ನು ಇಂದು ವೈದ್ಯಕೀಯ ತಪಾಸಣೆಗಾಗಿ ಶ್ರೀನಗರದ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದ ವೇಳೆ ಉಗ್ರರು ಧಾಳಿ ನಡೆಸಿದ್ದಾರೆ. ನವೀದ್‍ನನ್ನು ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಪೆÇಲೀಸ್ ಬೆಂಗಾವಲಿನಲ್ಲಿ ಕರೆ ತರಲಾಗುತ್ತಿತ್ತು. ಈ ವೇಳೆ ಧಾಳಿ ನಡೆಸಿದ ಉಗ್ರರು ಕೈದಿ ಪರಾರಿಯಾಗಲು ನೆರವಾಗಿದ್ದಾರೆ.
ಯುವ ಉಗ್ರವಾದ ಶೇ. 43 ರಷ್ಟು ಹೆಚ್ಚಳ
ಶ್ರೀನಗರ, ಫೆ. 6: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ಸಂಘಟನೆ ಸೇರುತ್ತಿರುವ ಯುವಕರ ಸಂಖ್ಯೆ ಶೇ. 43 ರಷ್ಟು ಹೆಚ್ಚಳವಾಗಿದೆ ಎಂದು ಕಣಿವೆ ರಾಜ್ಯದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಮಂಗಳವಾರ ವಿಧಾನಸಭೆಗೆ ತಿಳಿಸಿದ್ದಾರೆ. ಸ್ಥಳೀಯ ಯುವಕರು ಉಗ್ರ ಸಂಘಟನೆ ಸೇರಿದ ಕುರಿತ 2010ರಿಂದ ಲಭ್ಯವಿರುವ ಮಾಹಿತಿ ನೀಡಿದ ಸಿಎಂ ಮುಫ್ತಿ, 2017ರಲ್ಲಿ ಒಟ್ಟು 126 ಯುವಕರ ಉಗ್ರ ಸಂಘಟನೆ ಸೇರಿದ್ದಾರೆ. 2016ರಲ್ಲಿ 88 ಯುವಕರು, 2015ರಲ್ಲಿ 66 ಯುವಕರು ಉಗ್ರ ಸಂಘಟನೆ ಸೇರಿದ್ದಾರೆ ಎಂದು ಮೆಹಬೂಬಾ ಮುಫ್ತಿ ಅವರು ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದರು.
2017 ರಲ್ಲಿ 75 ಉಗ್ರರ ಹತ್ಯೆ
ನವದೆಹಲಿ, ಫೆ. 6: 2017 ರಲ್ಲಿ 515 ಒಳನುಸುಳುವಿಕೆ ಪ್ರಕರಣಗಳು ನಡೆದಿದ್ದು, 75 ಉಗ್ರರ ಹತ್ಯೆಗಳಾಗಿವೆ ಎಂದು ಕೇಂದ್ರ ಸರ್ಕಾರ ಲೋಕಸಭೆಗೆ ತಿಳಿಸಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಕಿರಣ್ ರಿಜಿಜು 2016 ರಲ್ಲಿ 454 ಒಳನುಸುಳುವಿಕೆ ಪ್ರಕರಣಗಳು ನಡೆದಿತ್ತು, 45 ಉಗ್ರರನ್ನು ಹತ್ಯೆ ಮಾಡಲಾಗಿತ್ತು, 2017 ರಲ್ಲಿ 515 ಒಳನುಸುಳುವಿಕೆ ಪ್ರಕರಣಗಳು ನಡೆದಿದ್ದು, ಒಟ್ಟು 75 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದು ಸದನಕ್ಕೆ ತಿಳಿಸಿದ್ದಾರೆ. 2015 ರಲ್ಲಿ ಒಟ್ಟಾರೆ 223 ಒಳನುಸುಳುವಿಕೆ ಪ್ರಕರಣಗಳು ಸಂಭವಿಸಿತ್ತು, 64 ಉಗ್ರರನ್ನು ಹತ್ಯೆ ಮಾಡಲಾಗಿತ್ತು ಎಂದಿರುವ ಕಿರಣ್ ರಿಜಿಜು, ಭದ್ರತಾ ಸಿಬ್ಬಂದಿಗಳು ಸೂಕ್ತ ಕ್ರಮ ಕೈಗೊಳ್ಳುತ್ತಿದ್ದಾರೆ, ಗಡಿಯಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಸದನಕ್ಕೆ ಮಾಹಿತಿ ನೀಡಿದ್ದಾರೆ.
ಕ್ಲುಲ್ಲಕ ಕಾರಣಕ್ಕೆ ಕಾಂಗ್ರೆಸ್ ಮುಖಂಡನ ಹತ್ಯೆ
ನವದೆಹಲಿ, ಫೆ. 6: ಕ್ಲುಲ್ಲಕ ವಿಚಾರಕ್ಕೆ ಗಲಾಟೆ ನಡೆದು ಕಾಂಗ್ರೆಸ್ ಮುಖಂಡರೊಬ್ಬರನ್ನು ನಡುರಸ್ತೆಯಲ್ಲಿಯೇ ಗುಂಡಿಟ್ಟು ಕೊಲೆಗೈದ ಅಮಾನವೀಯ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. 43 ವರ್ಷದ ವಿನೋದ್ ಮೆಹ್ರಾ ಕೊಲೆಯಾದ ದುರ್ದೈವಿ. ನಗರದ ಗೀತಾ ಕಾಲೋನಿಯಲ್ಲಿ ನಡೆದ ಮದುವೆ ಕಾರ್ಯಕ್ರಮಕ್ಕೆ ಹೋಗಿ ಬರುವಾಗ ಮೆಹ್ರಾ ಕೊಲೆಯಾಗಿದ್ದಾರೆ. ಮದುವೆ ಕಾರ್ಯಕ್ರಮ ಮುಗಿಸಿ ತನ್ನ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಜಿಟಿಕೆ ರಸ್ತೆಯಲ್ಲಿ ಮೆಹ್ರಾ ಅವರು ಚಲಿಸುತ್ತಿದ್ದ ವ್ಯಾಗನಾರ್ ಮತ್ತು ಮಾರುತಿ ಇಕೋ ವಾಹನ ಚಾಲಕನ ಜೊತೆ ಸಣ್ಣ ವಾಗ್ವಾದ ನಡೆದಿತ್ತು. ಓವರ್ ಟೇಕ್ ಮಾಡಲು ಮಾರುತಿ ಇಕೋ ಕಾರನ್ನು ಅತೀ ವೇಗವಾಗಿ ಚಲಾಯಿಸಿದ್ದನು. ಮೆಹ್ರಾ ಇದನ್ನು ವಿರೋಧಿಸಿದ್ದಾರೆ. ಪರಿಣಾಮ ಇವರಿಬ್ಬರ ಮಧ್ಯೆ ನಡುರಸ್ತೆಯಲ್ಲಿಯೇ ಕಾರುಗಳನ್ನು ನಿಲ್ಲಿಸಿ ಮಾತಿನ ಚಕಮಕಿ ನಡೆದಿದೆ. ಇಬ್ಬರೂ ತಮ್ಮ ವಾಹನಗಳನ್ನು ಭಾಲಸ್ವಾ ಎಂಬಲ್ಲಿ ಫ್ಲೈ ಓವರ್ ಮೇಲೆ ನಿಲ್ಲಿಸಿ, ಮಾತನ ಚಕಮಕಿ ನಡೆಸಿದ್ದಾರೆ. ಈ ವೇಳೆ ಕೂಡಲೇ ಇನ್ನೊಂದು ಕಾರಿನಲ್ಲಿದ್ದ ವ್ಯಕ್ತಿ ಕಾರಿನಿಂದ ಗನ್ ತೆಗೆದುಕೊಂಡು ಬಂದು ಮೆಹ್ರಾ ಅವರ ಮೇಲೆ ಗುಂಡು ಹಾರಿಸಿದ್ದಾನೆ.
ಮಾಧ್ಯಮಗಳ ವಿರುದ್ಧ ಸಚಿವ ಜಾರ್ಜ್ ಗರಂ
ಬೆಂಗಳೂರು, ಫೆ. 6: ನಿಮಗೆ ಬೇರೆ ಕೆಲಸ ಇಲ್ವಾ.. ಬ್ರೇಕಿಂಗ್ ಸುದ್ದಿ ಇಲ್ಲಾ ಅಂತ ನನ್ನ ವಿಷಯವನ್ನೇ ತೆಗೆದುಕೊಳ್ತೀರಾ ಅಂತ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮಾಧ್ಯಮಗಳ ಮೇಲೆ ಹರಿಹಾಯ್ದಿದ್ದಾರೆ. ವಿಧಾನಸೌಧದಲ್ಲಿ ಗಣಪತಿ ಆತ್ಮಹತ್ಯೆ ಕೇಸ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದ್ದಕ್ಕೆ ಮಾಧ್ಯಮಗಳ ವಿರುದ್ಧ ಗರಂ ಆದ ಅವರು, ನನ್ನ ಪಿಎಸ್‍ಐ ಅನ್ನು ಸಿಬಿಐ ಕರೆಯಬಹುದು. ನನ್ನನ್ನು ಕರೆಯಬಹುದು ಅದು ಸಿ.ಬಿ.ಐ.ಗೆ ಬಿಟ್ಟ ವಿಚಾರ. ನೀವು ನನ್ನನ್ನು ಕೇಳುವುದೇ ತಪ್ಪು, ಕೇಳಲೇಬಾರದು, ಸಿಬಿಐ ನನ್ನನ್ನು ಕರೆಯಲಿ ಬಿಡಲಿ ನಿಮಗೆ ಬೇರೆ ವಿಷಯ ಇಲ್ವಾ. ಬ್ರೇಕಿಂಗ್ ಸುದ್ದಿ ಇಲ್ಲಾ ಅಂತ ನನ್ನ ವಿಷಯವನ್ನೆ ತಗೆದುಕೊಳ್ತೀರಾ ಅಂತ ಕಿಡಿಕಾರಿದ್ದಾರೆ. ಆ ಬೆಳವಣಿಗೆಯ ಒಂದೊಂದನ್ನು ಬ್ರೇಕಿಂಗ್ ನ್ಯೂಸ್ ಮಾಡಬೇಕಾ? ಕೊನೆಯವರೆಗೆ ಕಾಯಿರಿ ಆವಾಗ ಏನು ಅಂತ ಸುದ್ದಿ ಹಾಕ್ತೀರಾ ಅಂತ ಮಾಧ್ಯಮಗಳೆದುರು ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ.