ಮಡಿಕೇರಿ, ಫೆ. 4: ನಾಲ್ಕು ಕರಗ ದೇವತೆಗಳಲ್ಲಿ ಒಂದಾದ ನಗರದ ಶ್ರೀ ದಂಡಿನ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ತಾ. 5 (ಇಂದು) ಮತ್ತು 6 ರಂದು ನಡೆಯಲಿದೆ.
ವಾರ್ಷಿಕೋತ್ಸವದ ಅಂಗವಾಗಿ ತಾ. 5 ರಂದು ಸಂಜೆ 5 ಗಂಟೆಯಿಂದ ಪ್ರಸಾದ ಸಿದ್ಧಿ, ರಕ್ಷೋಘ್ನ ಹೋಮ, ವಾಸ್ತು ಹೋಮ, ವಾಸ್ತು ಪೂಜೆ, ವಿಷ್ಣು ಪೂಜೆ, ದಿಶಾ ಬಲಿ, ಮಹಾ ಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.
ತಾ. 6 ರಂದು ಬೆಳಿಗ್ಗೆ 8 ಗಂಟೆಯಿಂದ ಗಣಪತಿ ಹೋಮ, ಕಲಶ ಪೂಜೆ, ಕಲಶಾಭಿಷೇಕ, ನಾಗದೇವರಿಗೆ ಪಂಚಾಮೃತಾಭಿಷೇಕ, ನಾಗಪೂಜೆ, ದೇವಿಗೆ ಅಲಂಕಾರ ಪೂಜೆ ನಡೆಯಲಿದ್ದು, ಅಂದು ಮಧ್ಯಾಹ್ನ 12 ಗಂಟೆಗೆ ಮಹಾ ಪೂಜೆ ನಂತರ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.