ಮಡಿಕೇರಿ, ಫೆ. 3: ರಾಜ್ಯ ಟೈಲರ್ ಅಸೋಸಿಯೇಶನ್ ಮಡಿಕೇರಿ ಕ್ಷೇತ್ರ ಸಮಿತಿ, ಕೊಡಗು ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ಭೋದಕ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ನೇತ್ರದಾನ, ರಕ್ತದಾನ, ಉಚಿತ ವೈದ್ಯಕೀಯ ತಪಸಣಾ ಶಿಬಿರ ಹಾಗೂ ಸದಸ್ಯತ್ವ ನೋಂದಣಿ ಮತ್ತು ಸದಸ್ಯತ್ವ ನವೀಕರಣ ಕಾರ್ಯಕ್ರಮ ತಾ. 4 ರಂದು (ಇಂದು) ಬೆಳಿಗ್ಗೆ 9.30 ರಿಂದ ಸಂಜೆ 3 ಗಂಟೆಯವರೆಗೆ ನಗರದ ಬಾಲಭವನದಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಸಮಿತಿ ಅಧ್ಯಕ್ಷ ವಸಂತ್ ಕುಲಾಲ್ ವಹಿಸಲಿದ್ದು, ಶಾಸಕ ಅಪ್ಪಚ್ಚು ರಂಜನ್ ಉದ್ಘಾಟನೆ ಮಾಡಲಿದ್ದಾರೆ. ಶಾಸಕ ಕೆ.ಜಿ. ಬೋಪಯ್ಯ, ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಕೆ.ಎಸ್.ಟಿ.ಎ. ರಾಜ್ಯ ಸಮಿತಿ ಕಾರ್ಯದರ್ಶಿ ಎಂ.ಯು. ಅಷ್ರಪುನ್ನೀಸ, ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ಅಬ್ದುಲ್ ಅಜೀಜ್, ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ. ಕರುಂಬಯ್ಯ ಎಂ.ಡಿ, ಆರ್.ಆರ್. ಎಚ್ ಮಕ್ಕಳ ತಜ್ಞ ಡಾ. ನವೀನ್ ಕುಮಾರ್ ಬಿ.ಸಿ., ಜಿಲ್ಲಾಸ್ಪತ್ರೆ ನೇತ್ರ ತಜ್ಞ ಡಾ. ಕಿರಣ್ ಭಟ್ ಎಂ.ಎಸ್., ದಂತ ತಜ್ಞರಾದ ಡಾ. ದೀಪ, ಆಯುಷ್ ವೈದ್ಯಾಧಿಕಾರಿ ಡಾ. ಶೈಲಜಾ, ಹೋಮಿಯೋಪತಿ ವೈದ್ಯಾಧಿಕಾರಿ ಡಾ. ಅರುಣ್ ಅಸೂಟಿ ಇತರರು ಭಾಗವಹಿಸಲಿದ್ದಾರೆ.