ಭಾಗಮಂಡಲ, ಫೆ. 3: ಅಯ್ಯಂಗೇರಿ ಗ್ರಾ.ಪಂ. ಎದುರು ಐ.ಎನ್.ಟಿ.ಯು.ಸಿ. ವತಿಯಿಂದ ವಿವಿಧ ಬೇಡಿಕೆಗಳ ಈಡೇರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು.

ಅಯ್ಯಂಗೇರಿಯಲ್ಲಿ ಸ್ಥಳೀಯರಿಗೆ ಕುಡಿಯುವ ನೀರಿನ ಸಮಸ್ಯೆ, ಬೀದಿ ದೀಪ, ಚರಂಡಿ ವ್ಯವಸ್ಥೆ ಸರಿಪಡಿಸದಿರುವದನ್ನು ವಿರೋಧಿಸಿ ಗ್ರಾ.ಪಂ. ಸದಸ್ಯರುಗಳು ಸರಿಯಾಗಿ ವರ್ತಿಸುತ್ತಿಲ್ಲವೆಂದು ಆರೋಪಿಸಿ ಸಂಘಟನೆಯ ಉಪಾಧ್ಯಕ್ಷ ರಾಶೀದ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ 10 ದಿನಗಳ ಗಡುವು ವಿಧಿಸಿದ್ದು, ತಪ್ಪಿದಲ್ಲಿ ಗ್ರಾ.ಪಂ. ಎದುರು ಧರಣಿ ನಡೆಸಲಾಗುವದು ಎಂದು ಎಚ್ಚರಿಸಿದರು.

ಸಂಘಟನೆಯ ಅಧ್ಯಕ್ಷೆ ಇಸ್ಮಾಯಿಲ್, ಕಾರ್ಯಕರ್ತರಾದ ಜಲೀಲ್, ಇರ್ಫಾನ್, ಮುನೀರ್ ಸೇರಿದಂತೆ ಇತರರು ಇದ್ದರು.