ಮಡಿಕೇರಿ, ಫೆ. 2: ಬೆಂಕಿಯಿಂದ ಅರಣ್ಯವನ್ನು ರಕ್ಷಿಸಿ ಜಾಗೃತಿ ಜಾಥಾವನ್ನು ನಗರದಲ್ಲಿ ವೈಲ್ಡ್ ಲೈಫ್ ಫಸ್ಟ್ ಸಂಸ್ಥೆಯಿಂದ ಹಮ್ಮಿಕೊಳ ್ಳಲಾಗಿತ್ತು. ನಗರದ ಜ. ತಿಮಯ್ಯ ವೃತ್ತದಲ್ಲಿ ಜಾಥಾವನ್ನು ಮಡಿಕೇರಿ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಉದ್ಘಾಟಿಸಿದರು. ಜಾಥಾದಲ್ಲಿ ವೈಲ್ಡ್ ಲೈಫ್ ಫಸ್ಟ್ ಸಂಸ್ಥೆಯ ಕೆ.ಎಂ. ಚಿಣ್ಣಪ್ಪ, ಎ.ಎ. ಪೂವಯ್ಯ, ರಂಜನ್ ಚಂಗಪ್ಪ, ಸುಧೀಂದ್ರ ಬೆಂಗಳೂರು, ಕೆ.ಎಸ್. ಲೋಕೇಶ್ ಪಾಲ್ಗೊಂಡಿದ್ದರು. ಮಡಿಕೇರಿ ಭಾರತೀಯ ವಿದ್ಯಾಭವನದ ಕೊಡಗು ವಿದ್ಯಾಲಯ ವಿದ್ಯಾರ್ಥಿಗಳು ಜಾಗೃತಿ ಮೂಡಿಸುವ ಕರಪತ್ರವನ್ನು ಜಾಥಾದಲ್ಲಿ ಪಾಲ್ಗೊಂಡು ವಿತರಿಸಿದರು.