ಸಿದ್ದಾಪುರ, ಫೆ. 1: ಮರಗೋಡು ಹಾಗೂ ಹೊಸ್ಕೇರಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನದ ಕಾಮಗಾರಿಗಳಿಗೆ ತಾಲೂಕು ಪಂಚಾಯಿತಿ ಸದಸ್ಯ ಅಪ್ರು ರವೀಂದ್ರ ಭೂಮಿಪೂಜೆ ನೆರೆವೇರಿಸಿದರು.
ಅರೆಕಾಡು ಗ್ರಾಮದ ಜಗಜೀವನ್‍ರಾವ್ ಕಾಲೋನಿಯ ರಸ್ತೆ ಕಾಮಗಾರಿ ರೂ. 6 ಲಕ್ಷ ಹಾಗೂ ಮುಖ್ಯಮಂತ್ರಿಯ ವಿಶೇಷ ಅನುದಾನದಲ್ಲಿ ಹೊಸ್ಕೇರಿ ಬೆಟ್ಟಕ್ಕೆ ತೆರಳುವ ರಸ್ತೆ ಕಾಮಗಾರಿ ರೂ. 24 ಲಕ್ಷ ಮರಗೋಡು ಅಯ್ಯಪ್ಪ ಬಡಾವಣೆ ರೂ. 8 ಲಕ್ಷ ಹಾಗೂ ಕಟ್ಟೆಮಾಡು ಪರಂಬು ಪೈಸಾರಿ, ರಸ್ತೆ ರೂ. 8.30 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರೆವೇರಿಸಿದರು. ನಂತರ ಮಾತನಾಡಿದ ಅವರು ರಾಜ್ಯ ಸರ್ಕಾರ ಕೊಡಗು ಜಿಲ್ಲೆಯ ಗ್ರಾಮೀಣ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಸಾಕಷ್ಟು ಅನುದಾನವನ್ನು ಬಿಡುಗಡೆ ಮಾಡಿರುವದು ಸಂತಸ ತಂದಿದೆ ಎಂದರು.
ಗ್ರಾ.ಪಂ. ಅಧ್ಯಕ್ಷೆ ಮಮತ, ಉಪಾಧ್ಯಕ್ಷ ಯೂಸಫ್ ಆಲಿ, ಗ್ರಾ.ಪಂ. ಸದಸ್ಯರುಗಳಾದ ಜಯಣ್ಣ, ರೀನಾ, ವಲಯ ಕಾಂಗ್ರೆಸ್ ಸದಾಡೆನ್ನಿಸ್, ಮಂದ್ರಿರ ಮೋಹನ್‍ದಾಸ್, ಮಡಿಕೇರಿ ಬ್ಲಾಕ್ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಮಂಜುನಾಥ್, ಬ್ಲಾಕ್ ಉಪಾಧ್ಯಕ್ಷ ತೋಂಡಿಯಂಡ ಕುಶಾಲಪ್ಪ, ಕಾರ್ಯದರ್ಶಿ ಬಿ.ಬಿ. ಗಣೇಶ್, ಜಿ.ಪಂ. ಮಾಜಿ ಅಧ್ಯಕ್ಷ ಪಾಪು ಸಣ್ಣಯ್ಯ, ಗ್ರಾ.ಪಂ. ಮಾಜಿ ಸದಸ್ಯ ಬಾಲಕೃಷ್ಣ ಸೇರಿದಂತೆ ಹಲವರು ಹಾಜರಿದ್ದರು.