ಮಡಿಕೇರಿ, ಫೆ. 1: ಸುಂಟಿಕೊಪ್ಪ ಸಮೀಪದ ಶಾಂತಗಿರಿ ತೋಟದ ಪಕ್ಕ ಹೆದ್ದಾರಿಯಲ್ಲಿ ಇಂದು ರಾತ್ರಿ ಲಾರಿಯೊಂದು ಮಗುಚಿಕೊಂಡಿದೆ. ಎಣ್ಣೆ ಸಾಗಿಸುತ್ತಿದ್ದ ಲಾರಿಯು ಆಕಸ್ಮಿಕ ಚಾಲಕನ ಹತೋಟಿ ತಪ್ಪಿ ಮಗುಚಿಕೊಂಡಿದ್ದು, ಯಾವದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಸುಂಟಿಕೊಪ್ಪ ಪೊಲೀಸರು ಖಚಿತಪಡಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.