ಸೋಮವಾರಪೇಟೆ, ಫೆ.1: ಭಾರತ ರಾಷ್ಟ್ರೀಯ ಮಜ್ದೂರ್ ಕಾಂಗ್ರೆಸ್ ಯುವ ಘಟಕದ ರಾಜ್ಯ ಉಪಾಧ್ಯಕ್ಷರನ್ನಾಗಿ ಇಲ್ಲಿಗೆ ಸಮೀಪದ ಗಾಂಧಿನಗರದ ನಿವಾಸಿ ಎಂ.ಇ. ಅಶ್ರಫ್ ಅವರನ್ನು ನೇಮಕಗೊಳಿಸಲಾಗಿದೆ.
ಐಎನ್‍ಟಿಯುಸಿ ರಾಜ್ಯ ಜಂಟಿ ಪ್ರಧಾನ ಕಾರ್ಯದರ್ಶಿ ನಾಪಂಡ ಮುದ್ದಪ್ಪ ಮತ್ತು ರಾಜ್ಯ ಐಎನ್‍ಟಿಯುಸಿ ಅಧ್ಯಕ್ಷ ರಾಕೇಶ್ ಮಲ್ಲಿ ಅವರುಗಳ ನಿರ್ದೇಶನದಂತೆ ಅಶ್ರಫ್ ಅವರನ್ನು ರಾಜ್ಯ ಯುವ ಐಎನ್‍ಟಿಯುಸಿ ಉಪಾಧ್ಯಕ್ಷರನ್ನಾಗಿ ಯುವ ಘಟಕದ ಅಧ್ಯಕ್ಷ ಎಂ. ಶ್ರೀನಿವಾಸನ್ ನೇಮಕ ಮಾಡಿದ್ದಾರೆ.