ಕುಶಾಲನಗರ, ಫೆ. 1: ರೈತರಿಗೆ ಸ್ವಾವಲಂಬಿ ಬದುಕು ಕಟ್ಟಿಕೊಡುವಲ್ಲಿ ಕೇಂದ್ರ ಸರಕಾರದ ಯೋಜನೆಗಳು ಬಹಳ ಪ್ರಯೋಜನಕಾರಿಯಾಗಿವೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರು ಕುಶಾಲನಗರದಲ್ಲಿ ಪಕ್ಷದ ಬೂತ್ ಮಟ್ಟದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರಕಾರದ ಬಜೆಟ್‍ನಲ್ಲಿ ರೈತರ ಬಗ್ಗೆ ಕಾಳಜಿ ಹೊಂದಿದ್ದು ಹಸಿರು ಕ್ರಾಂತಿ ಯೋಜನೆಗೆ ಒತ್ತು ನೀಡಿದ್ದಾರೆ. ರೈತಪರ ಬಜೆಟ್ ಇದಾಗಿದ್ದು ಪ್ರಧಾನಮಂತ್ರಿ ಮೋದಿ ಅವರ ನೇತೃತ್ವದ ಸರಕಾರ ಉತ್ತಮ ಬಜೆಟ್ ನೀಡಿದೆ ಎಂದರು.

ಇದರೊಂದಿಗೆ ಬೆಂಗಳೂರು ವ್ಯಾಪ್ತಿಯಲ್ಲಿ ರೈಲು ಯೋಜನೆಗೆ ಕೂಡ ಪ್ರಾಮುಖ್ಯತೆ ನೀಡಿರುವದು ಶ್ಲಾಘನೀಯ ಎಂದ ಅವರು, ನೋಟ್‍ಬ್ಯಾನ್, ಜಿಎಸ್‍ಟಿ ನಡುವೆ ಕಂಡುಬಂದಿದ್ದ ಅಪಸ್ವರಕ್ಕೆ ಈ ಬಜೆಟ್ ಉತ್ತರವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.