ಮಡಿಕೇರಿ, ಜ.31: ಅಖಿಲ ಭಾರತ ಕರಾಟೆ ಡೊ ಫೆಡರೇಷನ್ ವತಿಯಿಂದ ಮುಂಬೈನಲ್ಲಿ ಆಯೋಜಿತ 29 ನೇ ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಬೊಮ್ಮಂಡ ಸ್ವರ ಬೋಪಣ್ಣ ಮತ್ತು ಬೊಮ್ಮಂಡ ಸಮೃದ್ದ ತಮ್ಮಯ್ಯ ಬ್ಲಾಕ್ ಬೆಲ್ಟ್ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಮತ್ತು ಕಂಚಿನ ಪದಕ ಗಳಿಸುವ ಮೂಲಕ ಸಾಧನೆ ತೋರಿದ್ದಾರೆ.

ದೇಶದ 21 ರಾಜ್ಯಗಳ ಸ್ಪರ್ಧಿಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಸ್ವರ ಬೋಪಣ್ಣ ಮತ್ತು ಸಮೃದ್ದ್ ತಮ್ಮಯ್ಯ 2015 ರಿಂದಲೂ ಚಾಂಪಿಯನ್ ಸ್ಥಾನ ಪಡೆದುಕೊಂಡು ಬರುತ್ತಿದ್ದು, ಎಐಕೆಎಫ್ ವತಿಯಿಂದ ಡೆನ್ 1 ಬ್ಲಾಕ್ ಬೆಲ್ಟ್ ಪಡೆದಿದ್ದಾರೆ.

ಬೆಂಗಳೂರಿನ ಕೆನ್ ಈ ಮುಬಾನಿ ಶಿಟೋ ರಿಯು ಕರಾಟೆ ತರಬೇತಿ ಸಂಸ್ಥೆಯ ವಿದ್ಯಾರ್ಥಿ ಗಳಾಗಿರುವ ಇವರು ಗೋಣಿಕೊಪ್ಪ ಮೂಲದ ಬೊಮ್ಮಂಡ ಬೋಪಣ್ಣ, ರೇಷ್ಮಾ ದಂಪತಿಗಳ ಮಕ್ಕಳಾಗಿದ್ದಾರೆ. ರಮ್ಯ ಮತ್ತು ಕ್ಯೋಶಿ ಆರ್. ಗಣೇಶ್ ಕರಾಟೆ ತರಬೇತುದಾರರಾಗಿದ್ದಾರೆ.