ಗೋಣಿಕೊಪ್ಪ ವರದಿ, ಜ. 31: ಐ.ಸಿ.ಏ.ಆರ್., ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ, ಸಾಂಬಾರು ಮಂಡಳಿ ಮತ್ತು ಭಾರತೀಯ ಪ್ಲಾಂಟೇಷನ್ ಬೆಳೆಗಳ ನಿರ್ವಹಣಾ ಸಂಸ್ಥೆ, ಸಂಯುಕ್ತ ಆಶ್ರಯದಲ್ಲಿ ತಾ. 16 ರಂದು ಕಾಳುಮೆಣಸಿನಲ್ಲಿ ಮಾರುಕಟ್ಟೆಯ ಕುರಿತ ಒಂದು ದಿನದ ಉಚಿತ ಕಾರ್ಯಾಗಾರ ಏರ್ಪಡಿಸಲಾಗಿದೆ. ಇಲ್ಲಿನ ಕೃಷಿ ವಿಜ್ಞಾನ ಕೇಂದ್ರ ಸಭಾಂಗಣದಲ್ಲಿ ಬೆಳಿಗ್ಗೆ 10.30 ಕ್ಕೆ ಆರಂಭಗೊಳ್ಳಲಿದೆ ಎಂದು ಕೆ.ವಿ.ಕೆ. ಪ್ರಕಟಣೆ ತಿಳಿಸಿದೆ.