ಮಡಿಕೇರಿ, ಜ. 30: ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ವಿರುದ್ಧ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಅಸಮಾಧಾನ ವ್ಯಕ್ತಗೊಂಡಿತು.

ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯರಾದ ಕಿರಣ್ ಕಾರ್ಯಪ್ಪ, ಭವ್ಯ ಮಾತನಾಡಿ, ಕ್ರೀಡಾ ಇಲಾಖೆ ವತಿಯಿಂದ ಶಾಲೆಗಳಿಗೆ ನೀಡಲಾಗುವ ಕ್ರೀಡಾ ಸಾಮಗ್ರಿಗಳನ್ನು ನಿಗದಿತ ಸಮಯಕ್ಕೆ ನೀಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಪ್ರತಿಕ್ರಿಯಿಸಿದ ಅಧಿಕಾರಿ ಜಯಲಕ್ಷ್ಮಿಬಾಯಿ ಅವರು, ವಾಲಿಬಾಲ್ ಹಾಗೂ ಫುಟ್ಬಾಲ್ ಕ್ರೀಡಾ ಸಾಮಗ್ರಿಗಳನ್ನು ಈಗಾಗಲೇ ನೀಡಲಾಗಿದೆ. ಉಳಿದವುಗಳನ್ನು ಸದ್ಯ ದಲ್ಲಿಯೇ ನೀಡಲಾಗುತ್ತದೆ ಎಂದರು.

ಆಟವಾಡುವ ಸಮಯದಲ್ಲಿ ಕ್ರೀಡಾ ಪರಿಕರಗಳನ್ನು ನೀಡದೆ ಪರೀಕ್ಷೆ ಸಮೀಪಿಸುತ್ತಿರುವ ಸಂದರ್ಭ ನೀಡಿದರೆ ಏನು ಪ್ರಯೋಜನ ಎಂದು ಕಿರಣ್ ಕಾರ್ಯಪ್ಪ ಪ್ರಶ್ನಿಸಿದರು.

ಪೊನ್ನಂಪೇಟೆ ಸ್ಪೋಟ್ರ್ಸ್ ಹಾಸ್ಟೆಲ್‍ನಲ್ಲಿ ವ್ಯವಸ್ಥೆಗಳು ಸರಿಯಿಲ್ಲ. ಅಲ್ಲಿನ ಮಕ್ಕಳಿಗೆ ಸಿಗಬೇಕಾದ ಸವಲತ್ತುಗಳು ಸಿಗುತ್ತಿಲ್ಲ ಎಂದರು. ಸ್ಪೋಟ್ರ್ಸ್ ಹಾಸ್ಟೆಲ್‍ಗಳಲ್ಲಿನ ಅವ್ಯವಸ್ಥೆ ಸರಿಪಡಿಲು ಜಿಲ್ಲಾ ಪಂಚಾಯಿತಿ ಸದಸ್ಯರನ್ನೊಳಗೊಂಡ ಪರಿಶೀಲನಾ ತಂಡವೊಂದನ್ನು ರಚಿಸುವಂತೆ ಸದಸ್ಯ ಮುರಳಿ ಸಲಹೆಯಿತ್ತರು. ಈ ಬಗ್ಗೆ ಚರ್ಚೆ ನಡೆಯಿತೆ ಹೊರತು ಪರಿಶೀಲನಾ ತಂಡ ರಚಿಸುವ ಬಗ್ಗೆ ತೀರ್ಮಾನವಾಗಲಿಲ್ಲ.