ವೀರಾಜಪೇಟೆ, ಜ. 31: ತಾಲೂಕು ಆಡಳಿತ ಗುರುಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸದೆ ಬೋವಿ ಜನಾಂಗಕ್ಕೆ ಅವಮಾನ ಮಾಡಿದೆ ಎಂದು ಜನಾಂಗದ ಜಿಲ್ಲಾಧ್ಯಕ್ಷ ಸುಜೀತ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಜಿತ್ ಅವರು, ಕಳೆದ ಮೂರು ವರ್ಷಗಳಿಂದ ಆಚರಿಸಿಕೊಂಡು ಬಂದಿರುವ ಬೋವಿ ಜನಾಂಗದ ಗುರುಸಿದ್ದರಾಮೇಶ್ವರ ಅವರ 846ನೇ ಜಯಂತಿಯನ್ನು ಜನವರಿ 14 ರಂದು ತಾಲೂಕು ಆಡಳಿತದಿಂದ ಆಚರಿಸಲಿಲ್ಲ. ಜಯಂತಿ ಆಚರಿಸಲು ಸರ್ಕಾರದಿಂದ ರೂ. 25 ಸಾವಿರ ಅನುದಾನ ನೀಡುತ್ತಿದೆ. ಕೂಡಲೇ ಗುರುಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಬೇಕು ಎಂದು ಹೇಳಿದರು.
ಉಪಾಧ್ಯಕ್ಷ ಮನೋಹರ್ ಮಾತನಾಡಿ, ಬೋವಿ ಜನಾಂಗ ಪರಿಶಿಷ್ಟ ಜಾತಿಗೆ ಸೇರಿದೆ. ತಾಲೂಕು ಕಚೇರಿಯಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ನೀಡುವಾಗ ವಿಳಂಬ ನೀತಿ ಅನುಸರಿಸುತ್ತಾರೆ. ಪರಿಶಿಷ್ಟ ಜಾತಿ ಎಂಬದಕ್ಕೆ ನಮ್ಮ ಹಿರಿಯರು ತೆಗೆದುಕೊಂಡಿರುವ ದಾಖಲಾತಿಗಳು ನಮ್ಮಲಿಲ್ಲ. ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಳ್ಳಬೇಕಾದರೆ ಜಾತಿ ಪ್ರಮಾಣ ಪತ್ರ ಅತ್ಯವಶ್ಯಕ. ಕೂಡಲೇ ಸರ್ಕಾರ ಮಧ್ಯಪ್ರವೇಶಿಸಿ ಬೋವಿ ಜನಾಂಗಕ್ಕೆ ನ್ಯಾಯ ಒದಗಿಸಿಕೊಡಬೇಕಾಗಿ ಆಗ್ರಹಿಸಿದರು.
ಗೋಷ್ಠಿಯಲ್ಲಿ ತಾಲೂಕು ಅಧ್ಯಕ್ಷ ದರ್ಶನ್ ಉಪಸ್ಥಿತರಿದ್ದರು.