ಕುಶಾಲನಗರ: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಪದವೀಧರ ಶಿಕ್ಷಕರ ಸಂಘದ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಸತ್ಯನಾರಾಯಣ ಅವರನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಮಲ್ಲಿಕಾರ್ಜುನ, ಎಂ.ಬಿ. ಶಬಾನ, ಕಾರ್ಯದರ್ಶಿಯಾಗಿ ಶಾಂತಕುಮಾರ್, ಸಂತೋಷ್ ಕುಮಾರ್, ಕಾರ್ಯದರ್ಶಿಯಾಗಿ ನಿರ್ಮಲ ಹೆಚ್.ಎನ್. ಹಾಗೂ ಕೋಶಾಧ್ಯಕ್ಷರಾಗಿ ಗಿರೀಶ್ ಹೆಚ್. ಸಂಘಟನಾ ಕಾರ್ಯದರ್ಶಿಗಳಾಗಿ ವಸಂತಕುಮಾರ್, ಮುಜಮಿಲ್, ಸುನೀತಾ, ಜವರಯ್ಯ ನೇಮಕಗೊಂಡಿದ್ದಾರೆ. ನಿರ್ದೇಶಕರುಗಳಾಗಿ ದಿವಾಕರ, ಪರಮೇಶ್ವರ, ಸ್ವಾಮಿ, ಬಸವರಾಜಪ್ಪ, ಪುರುಷೋತ್ತಮ, ಚಿನ್ನಪ್ಪ, ಉಮಾದೇವಿ, ಗಾಯತ್ರಿ, ಪ್ರೇಮ ಇವರುಗಳನ್ನು ಆಯ್ಕೆ ಮಾಡಲಾಯಿತು.