ಸೋಮವಾರಪೇಟೆ, ಜ.31: ಹಿರಿಸಾವೆ-ಶಾಂತಳ್ಳಿ ರಾಜ್ಯ ಹೆದ್ದಾರಿ ಅಭಿವೃದ್ಧಿಗೆ 5054 ರಾಜ್ಯ ಲೆಕ್ಕಶೀರ್ಷಿಕೆಯಡಿ ರೂ. 6 ಕೋಟಿ ಬಿಡುಗಡೆಯಾಗಿದ್ದು, ಶಾಂತಳ್ಳಿ ಗೌರಿಕೆರೆ ಸಮೀಪದ ರಸ್ತೆ ಅಗಲೀಕರಣಕ್ಕೆ ತಡೆಯೊಡ್ಡಿದ್ದ ಪ್ರಕರಣವನ್ನು ಗ್ರಾಮದ ಮುಖಂಡರ ಮಧ್ಯಸ್ಥಿಕೆಯಲ್ಲಿ ಬಗೆಹರಿಸಲಾಯಿತು.
ಸುಮಾರು 9.5 ಕಿ.ಮೀ. ರಸ್ತೆ ಅಗಲೀಕರಣ ಮತ್ತು ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿದ್ದು, ಶಾಂತಳ್ಳಿಯ ಗೌರಿ ಕೆರೆ ಸಮೀಪ ಗ್ರಾಮಸ್ಥರೋರ್ವರು ರಸ್ತೆ ಅಗಲೀಕರಣ ಕಾಮಗಾರಿಗೆ ತಡೆಯೊಡ್ಡಿದ್ದರು.
ಈ ಹಿನ್ನೆಲೆ ಇಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ ಅವರ ಸಮ್ಮುಖದಲ್ಲಿ ತೋಟದ ಮಾಲೀಕರಾದ ಶೇಷಪ್ಪ ಅವರೊಂದಿಗೆ ಮಾತುಕತೆ ನಡೆಸಿ ರಸ್ತೆ ಅಗಲೀಕರಣ ಕಾಮಗಾರಿ ನಿರ್ವಹಿಸಲಾಯಿತು.
ಈ ಸಂದರ್ಭ ಲೋಕೋಪ ಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರಕುಮಾರ್, ಎಎಸ್‍ಐ ರವೀಂದ್ರನಾಥ್ ಮತ್ತು ಸಿಬ್ಬಂದಿಗಳು, ತಾ.ಪಂ. ಸದಸ್ಯ ಧರ್ಮಪ್ಪ, ಗ್ರಾ.ಪಂ. ಅಧ್ಯಕ್ಷ ಬಗ್ಗನ ಅನಿಲ್‍ಕುಮಾರ್, ಗ್ರಾಮಾಧ್ಯಕ್ಷ ಗಣಪತಿ, ಪ್ರಮುಖರಾದ ರಾಜಶೇಖರ್, ಗಿರೀಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.