ವೀರಾಜಪೇಟೆ, ಜ. 31 : ವೀರಾಜಪೇಟೆ ಬಳಿಯ ಕದನೂರು ಗ್ರಾಮಕ್ಕೆ ಹೋಗುವ ತಿರುವಿನಲ್ಲಿ ಮಾರುತಿ ಕಾರು ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಸವಾರ ರಾಮಕೃಷ್ಣ ಎಂಬವರು ಗಂಭೀರ ಗಾಯಗೊಂಡು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅಪರಾಹ್ನ ಸುಮಾರು 2 ಗಂಟೆ ಸಮಯದಲ್ಲಿ ಮಡಿಕೇರಿಯಿಂದ ವೀರಾಜಪೇಟೆ ಕಡೆಗೆ ಬರುತ್ತಿದ್ದ ಮಾರುತಿ 800 (ಕೆಎ.04 4356) ಹಾಗೂ ವೀರಾಜಪೇಟೆಯಿಂದ ಬೊಳ್ಳುಮಾಡುವಿಗೆ ಹೋಗುತ್ತಿದ್ದ ಆಕ್ಟೀವ್ ಹೋಂಡಾ ಸ್ಕೂಟರ್ (ಕೆ.ಎ.12-6- 67968) ಗೆ ಡಿಕ್ಕಿಯಾಗಿದೆ. ವೀರಾಜಪೇಟೆ ನಗರ ಪೊಲೀಸರು ಕಾರಿನ ಚಾಲಕ ಅಪ್ಸರ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.