ಸೋಮವಾರಪೇಟೆ, ಜ. 29: ಸಮೀಪದ ತಣ್ಣೀರುಹಳ್ಳ ಗ್ರಾಮದ ಗಿಲ್ಲಿ ಬ್ರದರ್ಸ್ ಸಂಘದ ವತಿಯಿಂದ ಫೆ. 13ರಂದು ಮಸಗೋಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪ್ರಥಮ ವರ್ಷದ ಪುರುಷರ ಮುಕ್ತ ವಾಲಿಬಾಲ್ ಪಂದ್ಯಾಟ ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಪ್ರಥಮ ಬಹುಮಾನವಾಗಿ ರೂ. 10 ಸಾವಿರ, ದ್ವಿತೀಯ 7 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ ಯೊಂದಿಗೆ ವೈಯಕ್ತಿಕ ಬಹುಮಾನ ಗಳನ್ನು ವಿತರಿಸಲಾಗುವದು. ಹೆಚ್ಚಿನ ಮಾಹಿತಿಗೆ ಮೊ: 9741533098, 9535535233 ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.