ಮಡಿಕೇರಿ, ಜ.28 : ಬೆಂಗಳೂರಿನ ಮಾಣಿಕ್‍ಷಾ ಮೈದಾನದಲ್ಲಿ ನಡೆದ 69ನೇ ಗಣರಾಜ್ಯೋತ್ಸವದ ಪೆರೇಡ್‍ನಲ್ಲಿ ಭಾಗವಹಿಸಿದ್ದ ಭಾರತೀಯ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತಂಡದಲ್ಲಿ ಕೊಡಗಿನ ನಾಲ್ವರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 9ನೇ ತರಗತಿಯ ಪಿ.ಎ. ಪುಣ್ಯ ಪೊನ್ನಮ್ಮ ತಂಡದ ಮುಂದಾಳತ್ವವನ್ನು ವಹಿಸಿದ್ದರು. ಅಲ್ಲದೆ ತಂಡದಲ್ಲಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ 9ನೇ ತರಗತಿಯ ಎ.ಬಿ. ವಿಧಿತಾ ಪೂಣಚ್ಚ, ಅಮ್ಮತ್ತಿ ಗುಡ್ ಶೆಫರ್ಡ್ ಶಾಲೆಯ 9ನೇ ತರಗತಿಯ ಧನುಶ್ ಮತ್ತು ಮಡಿಕೇರಿ ಸಂತ ಜೋಸೆಫರ ಶಾಲೆಯ 7ನೇ ತರಗತಿಯ ಚೇತನಾ ಶ್ರೀ ಅವರುಗಳು ಮಡಿಕೇರಿ ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯ ದೈಹಿಕ ಶಿಕ್ಷಕ ಈರಪ್ಪ ಅವರ ಮಾರ್ಗದರ್ಶನದಲ್ಲಿ ಪಾಲ್ಗೊಂಡಿದ್ದರು.