ಗೋಣಿಕೊಪ್ಪ ವರದಿ, ಜ. 28 : ಅಖಿಲ ಅಮ್ಮಕೊಡವ ಸಮಾಜ ಹಾಗೂ ಪುತ್ತಮನೆ ಕುಟುಂಬ ವತಿಯಿಂದ ನಡೆಯಲಿರುವ 4 ನೇ ವರ್ಷದ ಅಮ್ಮಕೊಡವ ಜನಾಂಗಗಳ ಕೌಟುಂಬಿಕ ಕ್ರಿಕೆಟ್ ನಮ್ಮೆಯ ಲಾಂಛನವನ್ನು ಅನಾವರಣ ಗೊಳಿಸಲಾಯಿತು.

ಅಖಿಲ ಅಮ್ಮಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಲಾಂಛನ ಅನಾವರಣ ಕಾರ್ಯಕ್ರಮದಲ್ಲಿ ಪುತ್ತಮನೆ ಕುಟುಂಬದ ಅಧ್ಯಕ್ಷ ಪುತ್ತಮನೆ ಎಂ. ಗಣೇಶ್ ಹಾಗೂ ಅಖಿಲ ಅಮ್ಮಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು ಅನಾವರಣ ಗೊಳಿಸಿದರು.

ಈ ಸಂದರ್ಭ ಮಾತನಾಡಿದ ಪುತ್ತಮನೆ ಎಂ. ಗಣೇಶ್, 4 ನೇ ವರ್ಷದ ಕ್ರಿಕೆಟ್ ಅನ್ನು ಅಮ್ಮಕೊಡವ ಸಮಾಜ ಮತ್ತು ಪುತ್ತಮನೆ ಕುಟುಂಬ ಜಂಟಿಯಾಗಿ ಆಚರಿಸಲಿದೆ. ಹಾತೂರು ಪ್ರೌಢÀಶಾಲೆಯ ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ಏಪ್ರಿಲ್ 28ರಿಂದ ಮೂರು ದಿನಗಳ ಕಾಲ ನಡೆಯಲಿದೆ ಎಂದರು.

ಅಮ್ಮಕೊಡವ ಜನಾಂಗದ ಸುಮಾರು 22 ತಂಡಗಳು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅಚ್ಚುಕಟ್ಟಾಗಿ ಟೂರ್ನಿ ನಡೆಸಲಾಗುವದು ಎಂದರು.

ಸಮಾಜದ ಅಧ್ಯಕ್ಷ ಬಾನಂಡ ಪ್ರಥ್ಯು ಮಾತನಾಡಿ, ಕಳೆದ 3 ವರ್ಷ ನಡೆದ ಕೌಟುಂಬಿಕ ಕ್ರಿಕೆಟ್‍ನಿಂದ ನಾವು ಒಂದಾಗುತ್ತಿದ್ದೇವೆ. ಸಮಾಜಕ್ಕೆ ನಮ್ಮ ಪರಿಚಯ ಹೆಚ್ಚು ಸಿಗುವಂತಾಗಿದೆ ಎಂದರು.

ಈ ಸಂದರ್ಭ ಸಮಾಜದ ಕಾರ್ಯದರ್ಶಿ ಮನ್ನಕಮನೆ ಬಾಲಕೃಷ್ಣ, ಖಜಾಂಚಿ ಅಚ್ಚಿಯಂಡ ಸುನಿಲ್, ಪುತ್ತಮನೆ ಕುಟುಂಬ ಉಪಾಧ್ಯಕ್ಷ ಪಿ. ಎಂ. ಶ್ರೀನಿವಾಸ್, ಕಾರ್ಯದರ್ಶಿ ಜೀವನ್, ಖಜಾಂಚಿ ಪ್ರಸಾದ್, ಮಹಿಳಾ ಘಟಕ ಮಾಜಿ ಅಧ್ಯಕ್ಷೆ ರಾಧಾ ಗಣೇಶ್, ಕುಟುಂಬಸ್ತರುಗಳಾದ ಸ್ಮರಣ್, ದತ್ತು ಗಣೇಶ್, ಲಾಲಾ ಉಪಸ್ಥಿತರಿದ್ದರು.