ಮಡಿಕೇರಿ, ಜ. 27: ಕೊಡಗು-ದಕ್ಷಿಣ ಕನ್ನಡ ಗೌಡ ಸಮಾಜ ಸಂಘ (ಯು.ಎ.ಇ.) ವತಿಯಿಂದ 3ನೇ ವರ್ಷದ ವಾರ್ಷಿಕ ಕ್ರೀಡಾಕೂಟವು ಫೆಬ್ರವರಿ 2 ರಂದು ಬೆಳಿಗ್ಗೆ 8 ರಿಂದ ಸಾಯಂಕಾಲ 6.30 ರ ತನಕ ಹೆಲಿಯೋ ಕ್ರಿಕೆಟ್ ಮೈದಾನ, ಅಜ್ಮಾನ್‍ನಲ್ಲಿ ಜರುಗಲಿದೆ.

ಕ್ರೀಡಾಕೂಟದಲ್ಲಿ ಪುರುಷರಿಗಾಗಿ ಕ್ರಿಕೆಟ್ ಮತ್ತು ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಗಿದೆ. ವರ್ಷಂಪ್ರತಿಯಂತೆ ಕ್ರಮವಾಗಿ ಪುರುಷರ ವಿಭಾಗದಲ್ಲಿ ದುಬೈ ರಾಯಲ್ಸ್ (ದುಬೈ), ದುಬೈ ಡೇರ್ ಡೆವಿಲ್ಸ್ (ದುಬೈ), ಶಾರ್ಜಾ ಷೇಕರ್ಸ್ (ಶಾರ್ಜಾ), ಎಮಿರೇಟ್ಸ್ ಟೈಗರ್ಸ್ (ಶಾರ್ಜಾ) ಮತ್ತು ರಾಯಲ್ ಬುಲ್ಸ್ (ಅಬುಧಾಬಿ) ಕ್ರಿಕೆಟ್ ತಂಡಗಳು ಮತ್ತು ಮಹಿಳೆಯರ ವಿಭಾಗದಲ್ಲಿ ದುಬೈ, ಶಾರ್ಜಾ ಮತ್ತು ಅಬುಧಾಬಿಯಿಂದ ರಾಯಲ್ ಫಾಲ್ಕನ್ಸ್, ಅಬುಧಾಬಿ ಥ್ರ್ರೋಬಾಲ್ ತಂಡಗಳು ಭಾಗವಹಿಸಲಿರುವದು ಎಂದು ಪ್ರಕಟಣೆ ತಿಳಿಸಿದೆ.