ಮಡಿಕೇರಿ, ಜ. 27: ಫೆ. 1 ರಿಂದ 11ರ ವರೆಗೆ ಜಾರ್ಖಂಡ್‍ನ ರಾಂಚಿಯಲ್ಲಿ ನಡೆಯಲಿರುವ 8ನೇ ಹಿರಿಯ ಮಹಿಳೆಯರ ಎ ಡಿವಿಜನ್ ನ್ಯಾಷನಲ್ ಚಾಂಪಿಯನ್‍ಶಿಪ್ ಪಂದ್ಯಾವಳಿಗೆ ಹಾಕಿ ಕರ್ನಾಟಕ ತಂಡಕ್ಕೆ ಆಟಗಾರರನ್ನು ಆಯ್ಕೆ ಮಾಡಲಾಗಿದೆ.

ಎ.ಹೆಚ್. ಕಾವೇರಮ್ಮ ನಾಯಕಿಯಾಗಿ ತಂಡವನ್ನು ಮುನ್ನಡೆಸಲಿದ್ದು, ತಂಡದಲ್ಲಿ ಎಂ.ಜಿ. ಸಂಧ್ಯ, ಜಿ.ಟಿ. ಭವ್ಯ, ಸಿ.ಎಂ. ಭಾಗ್ಯಶ್ರೀ, ಎನ್. ಚೈತ್ರ, ಆರ್. ಚೆಲುವಾಂಬ, ಎನ್.ಆರ್. ಸೌಮ್ಯಶ್ರೀ, ಎಂ.ಡಿ. ಪೂಜಾ, ಬಿ.ಎಂ. ಕೋಮಲ, ಎಸ್.ಪಿ. ಕೃತಿಕಾ, ಪಿ.ಕೆ. ರುಕ್ಮಿಣಿ, ಪಿ.ಸಿ. ನಿಶಾ, ಎನ್.ಆರ್. ಸ್ವಪ್ನ, ಪಿ.ಎ. ಪವಿತ್ರ, ಎಂ.ಜೆ. ಲೀಲಾವತಿ, ಎನ್. ರಮ್ಯ, ಯು. ಶಾಲಿನಿ, ಕೆ.ಎಸ್. ವಿದ್ಯಾ ಆಯ್ಕೆಯಾಗಿ ದ್ದಾರೆ. ತರಬೇತು ದಾರರಾಗಿ ಆರ್. ಸುಂದರೇಶ್ ಹಾಗೂ ವ್ಯವಸ್ಥಾಪಕಿ ಯಾಗಿ ಸುಕನ್ಯ ಪಾಟಿಲ್ ಅವರುಗಳು ಕಾರ್ಯ ನಿರ್ವಹಿಸಲಿದ್ದಾರೆ. ತಂಡವು ತಾ. 28 ರಂದು (ಇಂದು) ರಾಂಚಿಗೆ ಪ್ರಯಾಣ ಬೆಳಸಲಿದೆ ಎಂದು ಹಾಕಿ ಕರ್ನಾಟಕ ಕಾರ್ಯದರ್ಶಿ ಡಾ. ಎ.ಬಿ. ಸುಬ್ಬಯ್ಯ ತಿಳಿಸಿದ್ದಾರೆ.