ಸೋಮವಾರಪೇಟೆ, ಜ.26: ಮನೆಯ ಮುಂಭಾಗ ಒಣಗಲು ಹಾಕಿದ್ದ ಕಾಫಿಯನ್ನು ಕಳವು ಮಾಡಿರುವ ಘಟನೆ ಸಮೀಪದ ಕಿರಗಂದೂರು ಗ್ರಾಮದಲ್ಲಿ ನಡೆದಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಕಿರಗಂದೂರು ಗ್ರಾಮದ ಜಾನಕಿ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಕೊಯ್ಲು ಮಾಡಿದ್ದ ಕಾಫಿಯನ್ನು ಪಲ್ಪಿಂಗ್ ಮಾಡಿ ಮನೆಯ ಮುಂಭಾಗ ಟಾರ್ಪಲ್ ಮೇಲೆ ಒಣಗಲು ಹಾಕಿದ್ದರು. ನಿನ್ನೆ ರಾತ್ರಿ ಸುಮಾರು 20 ಸಾವಿರ ಮೌಲ್ಯದ 50 ಕೆ.ಜಿ. ತೂಕದ 3 ಚೀಲಗಳಷ್ಟು ಕಾಫಿಯನ್ನು ಕಳ್ಳರು ಕಳವು ಮಾಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಸೋಮವಾರಪೇಟೆ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.