ಸುಂಟಿಕೊಪ್ಪ, ಜ.26: 7ನೇ ಹೊಸಕೋಟೆಯ ಸಂತ ಸಬಾಸ್ಟಿನ್ ದೇವಾಲಯದಲ್ಲಿ ತಾ. 27ರಿಂದ (ಇಂದಿನಿಂದ) ತಾ. 29 ರವರೆಗೆ ವಾರ್ಷಿಕ ಮಹೋತ್ಸವ ನಡೆಯಲಿದೆ. ಸಂತ ಸಬಾಸ್ಟೀನ್‍ರವರ ಮತ್ತು ಸಂತ ಮರಿಯಮ್ಮ ಹಬ್ಬವನ್ನು ಭಕ್ತಿಪೂರ್ವಕವಾಗಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ತಾ. 26 ರಂದು ಸಂಜೆ 4.15ಕ್ಕೆ ಧ್ವಜಾರೋಹಣ, 4.30ಕ್ಕೆ ಮೃತರಿಗೆ ದಿವ್ಯ ಬಲಿಪೂಜೆ ರೆ.ಫಾ. ಪ್ರದೀಶ್ ಕೊಲ್ಲಿಯಿಲ್ ಅವರು ನೆರವೇರಿಸಲಿದ್ದಾರೆ. 5.30 ಕ್ಕೆ ಮೃತರ ಸಮಾಧಿ ಸಂದರ್ಶನ ಹಾಗೂ ಪ್ರಾರ್ಥನೆ ರೆ.ಫಾ. ಸೆಬಾಸ್ಟೀನ್ ಪೊವತ್ತಿಂಗಲ್ ಅವರಿಂದ ನಡೆಯಲಿದೆ.

ತಾ.27 ರಂದು ಅಪರಾಹ್ನ 4.30ಕ್ಕೆ ವಿಧಾನಪೂರ್ವಕ ದಿವ್ಯಬಲಿಪೂಜೆ ಹಾಗೂ ಹಬ್ಬದ ಸಂದೇಶವನ್ನು ರೆ|ಫಾ|ಜೋಸ್ ಪಾನಾಂಬುಯ ಅವರು ನೆರವೇರಿಸಲಿದ್ದಾರೆ. ತಾ.28 ರಂದು 4 ವಿಧಾನ ಪೂರ್ವಕ ದಿವ್ಯ ಬಲಿಪೂಜೆ ಹಾಗೂ ಹಬ್ಬದ ಸಂದೇಶವನ್ನು ರೆ|ಫಾ| ಜೋಮಿಟ್ ಮಂಞಳಾಂಕುನ್ನೇಲ್ ನೀಡಲಿದ್ದಾರೆ. ಸಂಜೆ 6.30 ಗಂಟೆಗೆ ಮೆರವಣಿಗೆ ನಡೆಯಲಿದೆ.