ಕುಶಾಲನಗರ, ಜ. 24: ಛತ್ತೀಸ್‍ಘಡ ರಾಜ್ಯಕ್ಕೆ ದುಬಾರೆ ಸಾಕಾನೆ ಶಿಬಿರದಿಂದ ಸ್ಥಳಾಂತರಿ ಸುವ ಸಂದರ್ಭ ಪರಾರಿಯಾಗಿದ್ದ ಸಾಕಾನೆ ಅಜ್ಜಯ್ಯನನ್ನು ಇದೀಗ ಶಿಬಿರಕ್ಕೆ ಕರೆ ತರುವಲ್ಲಿ ಆನೆ ಮಾವುತರು ಯಶಸ್ವಿಯಾಗಿದ್ದಾರೆ.
ದುಬಾರೆ ಸಾಕಾನೆ ಶಿಬಿರದಲ್ಲಿ ಅಜ್ಜಯ್ಯನನ್ನು ಆರೈಕೆ ಮಾಡಲಾಗುತ್ತಿದ್ದು ಮಾವುತರು ತಿಂಡಿ ತಿನಿಸುಗಳನ್ನು ನೀಡುತ್ತಿದ್ದಾರೆ. ಅಜ್ಜಯ್ಯನನ್ನು ಅದರ ಮಾವುತನಾದ ಅಣ್ಣಯ್ಯ ಮತ್ತು ಶಿಬಿರದ ಮುಖಂಡ ಡೋಬಿ ಮತ್ತಿತರರು ಕರೆ ತಂದಿದ್ದು ಆರೈಕೆ ಮಾಡುತ್ತಿದ್ದಾರೆ.
ಛತ್ತೀಸ್‍ಘಡ ರಾಜ್ಯಕ್ಕೆ ಕರೆದೊಯ್ಯಲು ಸಿದ್ದತೆ ನಡೆಸುತ್ತಿದ್ದ ಸಂದರ್ಭ ಇತರೆ ಸಾಕಾನೆಗಳ ಒತ್ತಡದಿಂದ ಅಜ್ಜಯ್ಯನಿಗೆ ಅಲ್ಪಸ್ವಲ್ಪ ಪೆಟ್ಟುಗಳು ಉಂಟಾಗಿದೆ ಎಂದು ತಿಳಿದುಬಂದಿದೆ. ಸ್ಥಳಾಂತರಕ್ಕೆ ಸಿದ್ದತೆ ನಡೆಸುತ್ತಿದ್ದ ಸಂದರ್ಭ ಸೋಮವಾರ ತಡರಾತ್ರಿಯಲ್ಲಿನ ಅಜ್ಜಯ್ಯ ತನ್ನ ಕಾಲಿನ ಸರಪಳಿಯನ್ನು ತುಂಡರಿಸಿ ಕಾವೇರಿ ನದಿಯತ್ತ ಪರಾರಿಯಾಗಿ ನದಿಯಲ್ಲಿ ದಿನವಿಡಿ ಕಾಲಕಳೆದ ಬಗ್ಗೆ ವರದಿಯಾಗಿತ್ತು.