ಚೆಟ್ಟಳ್ಳಿ, ಜ. 25: ಕೊಡಗಿನಲ್ಲೀಗ ಕಾಫಿ ಕುಯ್ಲಿನ ಸಮಯ ವಿದೇಶಿಗರು ಕೊಡಗಿನ ಕಾಫಿಯ ಬಗ್ಗೆ ತಿಳಿಯಲು ಬಂದವರು ಕಾಫಿ ತೋಟದಲ್ಲಿ ಸುತ್ತಾಡಿ... ಕಾಫಿ ಕೊಯ್ದು ಚೀಲಕ್ಕೆ ತುಂಬಿ ‘ಎಂಜಾಯ್’ ಮಾಡಿದರು.

ಅರ್ಜಟೈನದ ಇರಾಡೊ ಸಂತಕರ್ಟ್ ಎಂಬ ಯುವಕ ಹಾಗೂ ಇಂಗ್ಲೇಂಡಿನ ಸರಹ ಸಂತಕರ್ಟ್ ಎಂಬ ಮಹಿಳೆ ಇಬ್ಬರು ಸೇರಿ ಸ್ಫೇನಿನಲ್ಲಿ ‘ಕಾಫಿ ಶೋಶಲ್’ ಎನ್ನುವ ಕಾಫಿ ಕೆಫೆಯನ್ನು ಹಲವು ವರ್ಷಗಳಿಂದ ನಡೆಸುತ್ತಿದ್ದು, ವಿದೇಶದಲ್ಲಿ ಬೆಳೆಯುವ ಕಾಫಿಯ ಬೀೀಜವನ್ನು ಖರೀದಿಸಿ ತಾಜಾ ಕಾಫಿಯನ್ನು ತಯಾರಿಸಿ ಮಾರಾಟ ಮಾಡುತ್ತಿದ್ದಾರಂತೆ.

ಭಾರತದಲ್ಲಿ ಉತ್ತವi ಗುಣಮಟ್ಟದ ಕಾಫಿ ದೊರೆಯುವ ಬಗ್ಗೆ ಮಾಹಿತಿ ಪಡೆದ ವಿದೇಶಿಗರು ಕಾಫಿಯ ಮೂಲವಾದ ಕೊಡಗಿಗೆ ಕಳೆದೆರಡು ದಿನಗಳ ಹಿಂದೆ ಬಂದಿದ್ದಾರೆ. ಅಮ್ಮತ್ತಿಯ ಕುಂಞಂಡ ಮಾಚಯ್ಯ ಹಾಗೂ ಸಿದ್ದಾಪುರದ ರಿವರ್ ಸೈಡ್ ಕಾಫಿ ಎಸ್ಟೇಟಿನ ಮಾಲೀಕರಾದ ಚೇನಂಡ ಚುಮ್ಮಿ ಪೂವಯ್ಯ ಅವರ ಕಾಫಿ ತೋಟಗಳಲ್ಲಿ ಸುತ್ತಾಡಿದ್ದಾರೆ. ಗಿಡಗಳಲ್ಲಿ ಹಣ್ಣಾಗಿದ್ದ ಕಾಫಿಯನ್ನು ವಿದೇಶಿಗರು ಕುಯ್ದು ಕಣದಲ್ಲಿ ಒಣಗುತ್ತಿದ್ದ ಕಾಫಿಗಳಿಗೆ ಗೋರಮಣೆಯನ್ನು ಎಳೆದರು, ಚೀಲಕ್ಕೆ ತುಂಬಿ ‘ಎಂಜಾಯ್’ ಮಾಡಿದರು. ಕಾಫಿ ಬೆಳೆಯುವ ಬಗ್ಗೆ ಹಾಗೂ ನಿರ್ವಹಣೆ ಬಗ್ಗೆ ಮಾಹಿತಿ ಪಡೆದರು.

ಅಮ್ಮತ್ತಿಯ ಕುಂಞಂಡ ಮಾಚಯ್ಯ ಅವರ ತೋಟದಲ್ಲಿ ಆನೆಯ ಲದ್ದಿಯಲ್ಲಿ ಹಾಗೂ ಕಾಡುಬೆಕ್ಕು ತಿಂದು ಹಾಕಿದ ಟಸ್ಕರ್ ಕಾಫಿ ಹಾಗೂ ಸಿವೆಟ್ ಕಾಫಿಗೆ ವಿದೇಶದಲ್ಲಿ ಬೇಡಿಕೆ ಇದೆ ಎಂದು ಪಡೆದರು. ಹಿಂದೆ ಕೊಡಗಿನಲ್ಲಿ ಬೆಲ್ಲದ ಕಾಫಿಯನ್ನು ಬಳಸುತ್ತಿದ್ದ ಬಗ್ಗೆ ಚುಮ್ಮಿ ಪೂವಯ್ಯ ಅವರು ವಿವರಿಸಿ ಬೆಲ್ಲ ಕಾಫಿ ನೀಡಿದರು. ಬೆಲ್ಲ ಕಾಫಿಯನ್ನು ಸವಿದು ವಿದೇಶಿಗರು ತೆರಳಿದರು.

- ಕರುಣ್ ಕಾಳಯ್ಯ