ಮಡಿಕೇರಿ, ಜ. 25: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜಿನಲ್ಲಿ ಗಣರಾಜ್ಯೋತ್ಸವ ಆಚರಣೆ ನಡೆಯಲಿದ್ದು, ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ವಹಿಸಲಿದ್ದು, ಅತಿಥಿಯಾಗಿ ಜಿಲ್ಲಾ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಪಾಲ್ಗೊಳ್ಳುವರು.

*ಗಣರಾಜ್ಯೋತ್ಸವ ಪ್ರಯುಕ್ತ ತಾ. 26 ರಂದು (ಇಂದು) ಬೆಳಿಗ್ಗೆ 8.30 ಗಂಟೆಗೆ ನಕ್ಷತ್ರ, ಮಿಲನ, ವಜ್ರ ಹಾಗೂ ದೃಷ್ಟಿ ಗುಂಪಿನ ವತಿಯಿಂದ ಕುಮಾರನ್ ವಿಲಾಸ್ ಹೊಟೇಲ್ ಮುಂಭಾಗ ಧ್ವಜಾರೋಹಣ ನೆರವೇರಿಸಲಾಗುವದು. ಮುಖ್ಯ ಅತಿಥಿಗಳಾಗಿ ನಗರಸಭಾ ಸದಸ್ಯ ಪ್ರಕಾಶ್ ಆಚಾರ್ಯ, ಮಾಜಿ ಸದಸ್ಯರಾದ ಸತೀಶ್ ಪೈ, ಮೋಂತಿ ಗಣೇಶ್, ನಗರ ಚೇಂಬರ್ ಅಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ಟೌನ್ ಬ್ಯಾಂಕ್ ಅಧ್ಯಕ್ಷ ಬಿ.ಕೆ. ಜಗದೀಶ್ ಭಾಗವಹಿಸಲಿದ್ದಾರೆ.

*ಚೆಟ್ಟಳ್ಳಿಯ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ವೀರಾಜಪೇಟೆ ಪದವಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ (ಎನ್‍ಎಸ್‍ಎಸ್)ದ ಸಂಯುಕ್ತ ಆಶ್ರಯದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ ಪುತ್ತರಿರ ಕಾರ್ಯಪ್ಪ ಧ್ವಜಾರೋಹಣ ನೆರವೇರಿಸಲಿದ್ದಾರೆ.

*ಗಾಳಿಬೀಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ 9.30 ಗಂಟೆಗೆ ಹಿರಿಯರಾದ ಎ. ಈರಪ್ಪ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ.