ಮಡಿಕೇರಿ, ಜ. 23: ವೀರಭದ್ರೇಶ್ವರ ಯುವಕ ಸಂಘ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯುವಜನ ಮೇಳದಲ್ಲಿ ಹಾಕತ್ತೂರು ಗ್ರಾಮದ ತೊಂಭತ್ತು ಮನೆ ತ್ರಿನೇತ್ರ ಯುವಕ ಸಂಘದ ಪ್ರಮುಖರು ಯುವಜನ ಮೇಳದಲ್ಲಿ ಭಜನಾ ಸ್ಪರ್ಧೆಯಲ್ಲಿ ಭಾಗವಹಿಸಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸುವ ಮೂಲಕ ರಾಜ್ಯ ಮಟ್ಟದ ಯುವಜನ ಮೇಳಕ್ಕೆ ಆಯ್ಕೆಯಾಗಿದ್ದಾರೆ. ಸಂಘದ ಸಾಂಸ್ಕøತಿಕ ಕಾರ್ಯದರ್ಶಿ ಎಂ.ಕೆ. ರಾಜ, ಅಧ್ಯಕ್ಷ ಪಿ.ಪಿ. ಸುಕುಮಾರ್, ಸದಸ್ಯರುಗಳಾದ ಪಿ.ಈ. ದಿವಾಕರ್, ಕೆ.ಎಂ. ವಿಜಯ, ಕೆ.ಕೆ. ಹರೀಶ್, ಕೆ.ಕೆ. ಮಂಜು, ಪಿ.ಎಸ್. ರಂಜು ಭಜನಾ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.

ಫೆ. 20 ರಿಂದ 22 ರವರೆಗೆ ಪುತ್ತೂರಿನಲ್ಲಿ ನಡೆಯುವ ರಾಜ್ಯಮಟ್ಟದ ಯುವಜನ ಮೇಳದಲ್ಲಿ ತ್ರಿನೇತ್ರ ಯುವಕ ಸಂಘ ಭಜನಾ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಲಿದೆ.