ನಾಪೆÇೀಕ್ಲು, ಜ. 22: ಜ್ಞಾನಕ್ಕಿಂತ ಸಂಪತ್ತಿಲ್ಲ. ಅಜ್ಞಾನಕ್ಕಿಂತ ಬಡತನವಿಲ್ಲ. ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ವಿಶ್ವ ಮಾನವ ಎ.ಪಿ.ಉಸ್ತಾದ್ ಕೈಗೊಂಡಿರುವ ಕಾರ್ಯ ದೇಶಕ್ಕೆ ನೀಡಿದ ಕೊಡುಗೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ ಅಭಿಪ್ರಾಯಪಟ್ಟರು.

ಕೊಟ್ಟಮುಡಿಯಲ್ಲಿ ಎಸ್‍ಎಸ್‍ಎಫ್ ವತಿಯಿಂದ ಮರ್ಕಝುಲ್ ಹಿದಾಯದಲ್ಲಿ ನಡೆಯುತ್ತಿರುವ ಪ್ರತಿಭೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಇಸ್ಲಾಂ ಪವಿತ್ರ ಶಾಂತಿ ಸಂದೇಶವನ್ನು ಸಾರುವ ಧರ್ಮವಾಗಿದೆ. ಪ್ರಪಂಚದಲ್ಲಿ ಎಲ್ಲರೂ ಇದನ್ನು ಅರ್ಥೈಸಿಕೊಳ್ಳಬೇಕಾಗಿದೆ ಎಂದರು.

ಕಾರ್ಯಕ್ರಮದಲ್ಲಿ 22 ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದು, ವಿದ್ಯಾರ್ಥಿಗಳ ಪ್ರತಿಭೆಯನ್ನು ವಿಶ್ವಮಟ್ಟದಲ್ಲಿ ಪ್ರದರ್ಶಿಸಲು ಇದು ವೇದಿಕೆಯಾಗಿದೆ ಎಂದರು. ಎಸ್‍ಎಸ್‍ಎಫ್‍ನ ಯೋಚನಾ ಲಹರಿ ಮೆಚ್ಚುವಂತದ್ದು. ವಿದ್ಯಾ ಕ್ಷೇತ್ರದಲ್ಲಿ ಎಸ್‍ಎಸ್‍ಎಫ್ ದೇಶದಲ್ಲಿ ಜವಾಬ್ದಾರಿಯುತ ನಾಗರಿಕರನ್ನು ನೀಡಿದ ಸಂಸ್ಥೆಯಾಗಿದೆ ಎಂದರು.

ವೇದಿಕೆಯಲ್ಲಿ ಎಸ್‍ಎಸ್‍ಎಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ, ಮಾಜಿ ಅಧ್ಯಕ್ಷ ಸಾಫಿ ಸಹಿದ್, ಜೆಡಿಎಸ್ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎ.ಮನ್ಸೂರ್ ಅಲಿ, ಕೊಟ್ಟಮುಡಿ ಹಂಸ, ಹಮೀದ್ ಕಬಡಕೇರಿ, ಮತ್ತಿತರ ಧಾರ್ಮಿಕ ಮುಖಂಡರು ಇದ್ದರು.