ಮಡಿಕೇರಿ, ಜ. 19: ‘ಪ್ರಜಾಸತ್ಯ’ ದಿನಪತ್ರಿಕೆಯ ವತಿಯಿಂದ ತಾ. 21 ರಂದು ಪೂರ್ವಾಹ್ನ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಬಾಲಭವನ ಸಭಾಂಗಣದಲ್ಲಿ ‘ವಿಷನ್ ಕೊಡಗು’ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕೆಯ ಸಂಪಾದಕ ಡಾ. ಬಿ.ಸಿ. ನವೀನ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪ್ರಜಾಸತ್ಯ’ ದಿನಪತ್ರಿಕೆ ಕಳೆದ ಎರಡೂವರೆ ವರ್ಷಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ಸುದ್ದಿಯ ವಿಶ್ಲೇಷಣೆಯನ್ನು ಎಲ್ಲ ಆಯಾಮಗಳಿಂದ ಮಾಡುತ್ತಾ ಬಂದಿದೆ. “ವಿಷನ್ ಕೊಡಗು” ಅಂಥ ಯೋಚನೆಗಳಲ್ಲಿ ಒಂದಾಗಿದ್ದು, ಕೊಡಗಿನ ಆಯ್ದ ರಾಜಕೀಯ ಪ್ರತಿನಿಧಿಗಳನ್ನು, ಕರೆದು ಅವರೊಂದಿಗೆ ಮಡಿಕೇರಿ, ಜ. 19: ‘ಪ್ರಜಾಸತ್ಯ’ ದಿನಪತ್ರಿಕೆಯ ವತಿಯಿಂದ ತಾ. 21 ರಂದು ಪೂರ್ವಾಹ್ನ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ನಗರದ ಬಾಲಭವನ ಸಭಾಂಗಣದಲ್ಲಿ ‘ವಿಷನ್ ಕೊಡಗು’ ಕಾರ್ಯಕ್ರಮ ನಡೆಯಲಿದೆ ಎಂದು ಪತ್ರಿಕೆಯ ಸಂಪಾದಕ ಡಾ. ಬಿ.ಸಿ. ನವೀನ್ ಕುಮಾರ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ಪ್ರಜಾಸತ್ಯ’ ದಿನಪತ್ರಿಕೆ ಕಳೆದ ಎರಡೂವರೆ ವರ್ಷಗಳಿಂದ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದು, ಸುದ್ದಿಯ ವಿಶ್ಲೇಷಣೆಯನ್ನು ಎಲ್ಲ ಆಯಾಮಗಳಿಂದ ಮಾಡುತ್ತಾ ಬಂದಿದೆ. “ವಿಷನ್ ಕೊಡಗು” ಅಂಥ ಯೋಚನೆಗಳಲ್ಲಿ ಒಂದಾಗಿದ್ದು, ಕೊಡಗಿನ ಆಯ್ದ ರಾಜಕೀಯ ಪ್ರತಿನಿಧಿಗಳನ್ನು, ಕರೆದು ಅವರೊಂದಿಗೆ ನೆರವೇರಿಸಲಿದ್ದು, ಅಧ್ಯಕ್ಷತೆಯನ್ನು ಪ್ರಜಾಸತ್ಯ ದಿನ ಪತ್ರಿಕೆಯ ಸಂಪಾದಕರು ವಹಿಸಲಿದ್ದು , ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ಎ. ಜೀವಿಜಯ, ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಉಚ್ಛ ನ್ಯಾಯಾಲಯದ ಹಿರಿಯ ವಕೀಲ ಎಚ್.ಎಸ್. ಚಂದ್ರಮೌಳಿ, ಕರ್ನಾಟಕ ರಾಜ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಮಾಂಗೇರ ಪದ್ಮಿನಿ ಪೊನ್ನಪ್ಪ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಸಂಕೇತ್ ಪೂವಯ್ಯ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಕೊಡಗಿನ ಅಭಿವೃದ್ಧಿಯಲ್ಲ್ಲಿ ಮಾಧ್ಯಮಗಳ ಪಾತ್ರ ಎಂಬ ವಿಚಾರವಾಗಿ ಟಿವಿ9 ವರದಿಗಾರ ಕೆ.ಬಿ. ಮಂಜುನಾಥ್ ಮಾತನಾಡಲಿದ್ದು, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ದಿನಪತ್ರಿಕೆಯ ಹಿರಿಯ ವರದಿಗಾರ ಬಿ.ಸಿ. ದಿನೇಶ್ ಉಪಸ್ಥಿತರಿದ್ದರು.