ಬೆಂಗಳೂರು, ಜ. 19: ಕಾಫಿ ಪ್ರವಾಸೋದ್ಯಮ ವಾಣಿಜ್ಯ ಚಟುವಟಿಕೆಗೆ ಸೀಮಿತವಾಗದೆ ಕಾಫಿ ಬೆಳೆಯುವ ಪ್ರದೇಶದ ಸಂಸ್ಕøತಿ, ಭೂ ಪ್ರದೇಶದ ಪರಿಚಯ, ಪ್ರವಾಸಿಗರಿಗೆ ಶೈಕ್ಷಣಿಕ ಮಾಹಿತಿ, ಮಳೆಕಾಡು ಪರಿಚಯ, ಅರಣ್ಯದಲ್ಲಿ ಚಾರಣ, ಜೀವ ವೈವಿಧ್ಯತೆಯ ಪರಿಚಯ, ಕಾಫಿ ನಾಡಿನ ಉತ್ಪನ್ನಗಳ ಪರಿಚಯ ದೊಂದಿಗೆ ಪರಿಸರ ಸ್ನೇಹಿ ಪ್ರವಾಸೋದ್ಯಮ ವಾಗಿ ರೂಪುಗೊಳಿಸಲು ಹಾಗೂ ಪೂರಕ ಮೂಲಭೂತ ಸೌಲಭ್ಯ ಕಲ್ಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ ಸದಾ ಸಿದ್ಧವಿದೆ ಎಂದು ರಾಜ್ಯ ಐಟಿ-ಬಿಟಿ ಹಾಗೂ ಪ್ರವಾ ಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಕಾಫಿ ಹಬ್ಬದಲ್ಲಿ ಜರುಗಿದ ಸಂವಾದ ಕಾರ್ಯಕ್ರಮದಲ್ಲಿ ಪ್ರಕಟಪಡಿಸಿದರು.

ಇಂಡಿಯಾ ಕಾಫಿ ಟ್ರಸ್ಟ್ ಅಧ್ಯಕ್ಷ ಅನಿಲ್ ಕುಮಾರ್ ಭಂಡಾರಿ ಕಾಫಿ ಪ್ರವಾಸೋದ್ಯಮದ ಪರವಾಗಿ ಸಾಧಕ ಬಾಧಕಗಳ ಕುರಿತು ಪ್ರಿಯಾಂಕ ಖರ್ಗೆ ಅವರನ್ನು ಪ್ರಶ್ನಿಸಿದರು.

ಇದೇ ಸಂದರ್ಭ ಮಾಜಿ ಕಾಫಿ ಮಂಡಳಿ ಉಪಾಧ್ಯಕ್ಷೆ ತಾರಾ ಅಯ್ಯಮ್ಮ ಕೊಡಗು ಕಾಫಿ ಬೆಳೆಗಾರ ಸಂಘಟನೆಯ ಪರವಾಗಿ ಕೊಡಗಿನಲ್ಲಿ ಕಾಫಿ ಪಾರ್ಕ್ ಹಾಗೂ ಪ್ರವಾಸೋದ್ಯಮ ಮಾಹಿತಿ ಕೇಂದ್ರ ಸ್ಥಾಪಿಸಲು ಮನವಿ ಪತ್ರವನ್ನು ಸಚಿವರಿಗೆ ನೀಡಿದರು.

ಪ್ರವಾಸೋದ್ಯಮದಲ್ಲಿ ಸಿಹಿ ಕಹಿ ಅನುಭವ, ಪ್ರವಾಸಿಗರ ಬೇಜವಾಬ್ದಾರಿ ವರ್ತನೆ ಎಲ್ಲವೂ ಇರುತ್ತದೆ.

ಈಗಾಗಲೇ ಕೊಡಗು, ಹಾಸನ, ಚಿಕ್ಕಮಗಳೂರು ಹೋಮ್ ಸ್ಟೇ ಸಂಘಟನೆಗಳ ಪ್ರಮುಖ ರೊಂದಿಗೆ ಕಾಫಿ ಪ್ರವಾಸೋದ್ಯಮ ಅಭಿವೃದ್ಧಿಯ ಕುರಿತು ಮಾತುಕತೆ ನಡೆಸಿದ್ದು, ಅನೈತಿಕ ಚಟುವಟಿಕೆ, ಅಪರಾಧ, ಜೂಜಾಟಕ್ಕೆ ಕಡಿವಾಣ, ಪ್ರವಾಸಿಗ ರಿಂದ ಸುಲಿಗೆ, ವಂಚನೆ ಇತ್ಯಾದಿಗಳಿಗೆ ಕಡಿವಾಣ ಹಾಕುವ ಚಿಂತನೆಯೊಂದಿಗೆ ಕಾಫಿ ಉತ್ಪಾದನೆ, ಕಾಫಿ ಬೀಜದಿಂದ ಕಾಫಿ ಬಟ್ಟಲಿನವರೆಗೂ ಕಾಫಿ ಇತಿಹಾಸ ವನ್ನು ಪ್ರವಾಸಿಗರಿಗೆ ತಿಳಿಸುವ ಕೆಲಸ ಆಗಬೇಕು ಎಂದು ಹೇಳಿದರು.

ಮೈಸೂರು ದಸರಾ ಪ್ರವಾಸೋದ್ಯ ಮದಂತೆ ಮುಂದೆ ಕೊಡಗು ದಸರಾ ಪ್ರವಾಸೋದ್ಯ ಮಕ್ಕೂ ಉತ್ತೇಜನ ನೀಡಲಾ ಗುವದು. ಸಾಹಸ ಕ್ರೀಡೆ, ಚಾರಣ, ರಾಕ್ ಕ್ಲೈಂಬಿಂಗ್ ಇತ್ಯಾದಿಗಳಿಗೂ ವಿಫುಲ ಅವಕಾಶ ಕಲ್ಪಿಸಲು ಸಾಧ್ಯವಿದೆ ಎಂದು ಹೇಳಿದರು.

ಪ್ರವಾಸಿಗರಿಗೆ ಕಾಫಿ ಪ್ರವಾಸೋದ್ಯಮ ಬಗ್ಗೆ ಅಗತ್ಯ ಮಾಹಿತಿ ನೀಡಲು, ಅಲ್ಲಿನ ವಿಶೇಷತೆಗಳನ್ನು ಮನವರಿಕೆ ಮಾಡಲು ವೆಬ್‍ಸೈಟ್ ಆರಂಭಿಸ ಲಾಗುವದು ಎಂದು ನುಡಿದರು.

ಪ್ರವಾಸಿಗರು ಪ್ಲಾಸ್ಟಿಕ್ ನಿಷೇಧವಿದ್ದರೂ ಅಲ್ಲಲ್ಲಿ ಅರಣ್ಯ ಪ್ರದೇಶದಲ್ಲಿ ಪ್ಲಾಸ್ಟಿಕ್ ಇತ್ಯಾದಿ ತ್ಯಾಜ್ಯ ವಿಲೇವಾರಿ ಮಾಡುವ ಬಗ್ಗೆ, ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಬಗ್ಗೆ ಉತ್ತಮ ಕಾರ್ಯ ಯೋಜನೆ ಹಾಕಿಕೊಳ್ಳಲಾಗುವದು ಎಂದು ಹೇಳಿದರು.

ಪಾಲಿಬೆಟ್ಟ ಟಾಟಾ ಕಾಫಿ ಬಂಗಲೆಗಳನ್ನು ಅತಿಥಿಗಳ ವಸತಿ ಗ್ರಹಗಳಾಗಿ ಮಾರ್ಪಡಿಸಿದ್ದು, ಎಲ್ಲವೂ 5 ಕೊಠಡಿಗಳ ಬೆಡ್ ರೂಮ್‍ಗೆ ಮಾತ್ರ ಅವಕಾಶ ನೀಡಬೇಕಾಗಿದೆ. ಜಿಎಸ್‍ಟಿ ಕಡಿತಕ್ಕೆ ಪ್ರಯತ್ನಿಸಲಾಗುವದು ಎಂದು ಸಂವಾದದಲ್ಲಿ ಸಚಿವರು ಭರವಸೆ ನೀಡಿದರು.

ಕೊಡಗಿನಲ್ಲಿ ಪ್ರವಾಸೋದ್ಯಮ ಇಲಾಖೆಗೆ ಸೀಮಿತವಾದ ಅಧಿಕಾರಿ ಯನ್ನು ನೇಮಕ ಮಾಡುವಂತೆ ಹೋಮ್ ಸ್ಟೇ ಸಂಘದ ಮೋಹನ್ ದಾಸ್ ಸಚಿವರಿಗೆ ಇದೇ ಸಂದರ್ಭ ಮನವಿ ಮಾಡಿದರು.

ಹೊರ ಜಿಲ್ಲೆಯವರು ಕೊಡಗಿನಲ್ಲಿ ಆಸ್ತಿ ಖರೀದಿ ಮಾಡಿ ಹೋಮ್ ಸ್ಟೇ ಆರಂಭಿಸಿದ್ದು, ಇದು ಘರ್ಷಣೆಗೆ ದಾರಿಯಾಗಿದೆ ಎಂದು ಬಾಳೆಲೆಯ ಹೋಮ್ ಸ್ಟೇ ಮಾಲೀಕ ಶರೀನ್ ಮುತ್ತಣ್ಣ ಸಚಿವರ ಗಮನ ಸೆಳೆದರು.

ಕೊಡಗು ಹೋಮ್ ಸ್ಟೇ ಸಂಘದ ಮಾಜಿ ಅಧ್ಯಕ್ಷ ಮದನ್ ಸೋಮಣ್ಣ, ಮಿಕ್ಕಿ ಕಾಳಪ್ಪ ಮುಂತಾದವರು ಉಪಸ್ಥಿತರಿದ್ದರು.

ಮಾಜಿ ರಾಜ್ಯ ಸಭಾ ಸದಸ್ಯೆ ಪ್ರೇಮಾ ಕಾರ್ಯಾಪ್ಪ ಅವರು ಕಾಫಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಕೊಡಗಿನ ಸಿದ್ದಾಪುರದ ಗುಹ್ಯ ಗ್ರಾಮದ ಶ್ಯಾಮ್ ಪಟ್ಟಡ ಅವರು ಕಾಫಿ ಕಣದಲ್ಲಿ ಮತ್ಸ್ಯೋದ್ಯಮ ಮೂಲಕ ಕಾಫಿ ಬೆಳೆಗಾರರು ತಮ್ಮ ಆರ್ಥಿಕ ಸ್ಥಿತಿಯನ್ನು ಉತ್ತಮ ಪಡಿಸಿಕೊಳ್ಳುವ ಕುರಿತು ಪ್ರತಿನಿಧಿಗಳಿಗೆ ಮಾಹಿತಿ ನೀಡಿದರು.

ಕಾಫಿ ಎಕ್ಸ್‍ಫೆÇೀ ವಸ್ತು ಪ್ರದರ್ಶನವೂ ಈ ಬಾರಿ ಕಾಫಿ ಬೆಳೆಗಾರರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಯಶಸ್ವಿಯಾಗಿದ್ದು ಕಾಫಿ ಚಿತ್ರಕಲೆ ಗಮನ ಸೆಳೆಯಿತು.

ಬೆಂಗಳೂರಿನ ಹಿಮಬಿಂದು ಎಂಬವರು ಕಾಫಿ ಬೀಜ, ಕಾಫಿ ಪುಡಿ ಹಾಗೂ ಕಾಫಿ ಡಿಕಾಕ್ಷನ್ ನಿಂದ ವಿವಿಧ ಚಿತ್ರಗಳನ್ನು ತಯಾರಿಸಿ, ಇದೇ ಪ್ರಥಮ ಬಾರಿಗೆ ವಸ್ತು ಪ್ರದರ್ಶನದಲ್ಲಿ ಮಾರಾಟ ಮಳಿಗೆ ತೆರೆದಿರುವದಾಗಿ ಶಕ್ತಿಗೆ ಮಾಹಿತಿ ನೀಡಿದರು.

ಕಾಫಿ ಸಂಸ್ಕರಣೆ, ಕಾಫಿ ಧೂಳು ನಿಯಂತ್ರಣ ಇತ್ಯಾದಿ ಬಗ್ಗೆ 2 ಕಾರ್ಯಾಗಾರ ಏರ್ಪಡಿಸ ಲಾಗಿತ್ತು.

- ಟಿ.ಎಲ್. ಶ್ರೀನಿವಾಸ್