ಮಡಿಕೇರಿ, ಜ. 18: ಜಿಲ್ಲಾ ಸಹಕಾರ ಸಭಾಂಗಣದಲ್ಲಿ ತಾ. 20 ರಂದು ಬೆಳಿಗ್ಗೆ 11 ಗಂಟೆಗೆ ಸಹಕಾರ ದವಸ ಭಂಡಾರಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಸಂಸ್ಥೆ ಚುನಾವಣೆ ಮತ್ತು ಲೆಕ್ಕಪತ್ರ ನಿರ್ವಹಣೆಯ ಕುರಿತು ಶಿಕ್ಷಣ ಕಾರ್ಯಕ್ರಮ ಏರ್ಪಡಿಸಲಾಗಿದೆ. ಹಿರಿಯ ಸಹಕಾರಿ ಬಿ.ಬಿ. ನಾಣಯ್ಯ ಉದ್ಘಾಟಿಸಲಿದ್ದು, ಸಂಸ್ಥೆ ಅಧ್ಯಕ್ಷ ಮನು ಮುತ್ತಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ನಿರ್ದೇಶPರುಗಳು ಹಾಗೂ ವಿಷಯ ತಜ್ಞರು ಪಾಲ್ಗೊಂಡು ಮಾರ್ಗದರ್ಶನ ನೀಡಲಿದ್ದಾರೆ ಎಂದು ಜಿಲ್ಲಾ ಸಹಕಾರ ಒಕ್ಕೂಟದ ಪ್ರಕಟಣೆ ತಿಳಿಸಿದೆ.